ಕಾಸರಗೋಡು: ಜಿಲ್ಲೆಯ ವಿವಿಧ ಶಕ್ತಿ ಕೇಂದ್ರಗಳಲ್ಲಿ ನವರಾತ್ರಿ ಮಹೋತ್ಸವಕ್ಕೆ ಸೋಮವಾರ ಸಂಭ್ರಮದ ಚಾಲನೆ ದೊರಕಿತು. ಕಾಸರಗೋಡು ಕೊರಕ್ಕೋಡು ಶ್ರೀ ಆರ್ಯಕಾತ್ರ್ಯಾಯಿನೀ ದೇವಿ ದೇವಸ್ಥಾನದಲ್ಲಿ ಬೆಳಗ್ಗೆ ಭಂಡಾರದ ಮನೆಯಿಂದ ಶ್ರೀದೇವರ ಭಂಡಾರ ದೇವಾಲಯಕ್ಕೆ ತಂದು ದೇವಸ್ಥಾನ ತಂತ್ರಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ಶುದ್ಧಿ ಕಲಶ, ಚಂಡಿಕಾ ಹೋಮ, ಮಹಾಪೂಜೆ ನಡೆಯಿತು. ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಅಂಗವಾಗಿ ಶ್ರೀ ಚಂಡಿಕಾ ಹೋಮ, ತುಲಾಭಾರ ಸೇವೆ, ಶ್ರೀದೇವರಿಗೆ ವಿಶೇಷ ಪೂಜೆ ನೆರವೇರಿತು. ಮಧೂರು ಶ್ರೀ ಕಾಳಿಕಾಂಬಾ ಮಠದಲ್ಲಿ ಆನೆಗುಂದಿ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಗಳ ದಿವ್ಯಾಶೀರ್ವಾದಗಳೊಂದಿಗೆ, ಮಾಯಿಪ್ಪಾಡಿ ಪುರೋಹಿತ ಬ್ರಹ್ಮಶ್ರೀ ಮಾಧವ ಆಚಾರ್ಯ ಅವರ ಣೇತೃತ್ವದಲ್ಲಿ ಶರನ್ನವರಾತ್ರಿ ಮಹೋತ್ಸವ ±ಸೋಮವಾರ ಆರಂಭಗೊಂಡಿತು.
ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಕಾಸರಗೋಡು ಪಿಲಿಕುಂಜೆ ಶ್ರೀ ಜಗದಂಬಾ ದೇವಿ ಕ್ಷೇತ್ರ, ಕಾಸರಗೋಡು ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನ, ಮಧೂರು ಶ್ರೀ ಕಾಳಿಕಾಂಬಾ ಮಠ, ಪೆರ್ಲ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ(ಉಳ್ಳಾಲ್ತೀ)ವಿಷ್ಣುಮೂರ್ತಿ ದೇವಸ್ಥಾನ, ಬಜಕೂಡ್ಲು ಶ್ರೀ ದುರ್ಗಾಪರಮೇಶ್ವರೀ ಭಜನಾಮಂದಿರ, ಬಾಯಾರು ಶ್ರೀಪಂಚಲಿಂಗೇಶ್ವರ ದೇವಾಲಯ, ಆವಳ ಮಠ ಶ್ರೀದುರ್ಗಾಪರಮೇಶ್ವರಿ ಕ್ಷೇತ್ರ, ಶುಳುವಾಲಮೂಲೆ ಶ್ರೀಸದನ, ಕೊಲ್ಲಂಗಾನ ಶ್ರೀಕ್ಷೇತ್ರ ಸಹಿತ ವಿವಿಧ ಕ್ಷೇತ್ರಗಳಲ್ಲಿ ನವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ಚಿತ್ರ: ಕಾಸರಗೋಡು ಕೊರಕ್ಕೋಡು ಶ್ರೀ ಆರ್ಯಕಾತ್ರ್ಯಾಯಿನಿ ದೇವಸ್ಥಾನದಲ್ಲಿ ಶ್ರೀ ಚಂಡಿಕಾ ಹೋಮ ನೆರವೇರಿತು.





