ಕಾಸರಗೋಡು: ನಗರದಲ್ಲಿ ನಿರ್ಮಿಸಿರುವ ಶೀ ಲಾಡ್ಜನ್ನು ತಕ್ಷಣ ತೆರೆದು ಕಾರ್ಯಾಚರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘ(ಎಐಡಿಡಬ್ಲ್ಯೂಎ)ದ ಕಾಸರಗೋಡು ಏರಿಯಾ ಸಮ್ಮೇಳನ ಸರ್ಕಾರವನ್ನು ಒತ್ತಾಯಿಸಿತು.
ಸಾಮಾಜಿಕ ಮಾಧ್ಯಮಗಳ ಮೂಲಕ ಮಹಿಳೆಯರನ್ನು ನಿರಂತರವಾಗಿ ಅವಮಾನಿಸುವ ಸೈಬರ್ ದಾಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಸಂಘಟನೆ, ಈ ಬಗ್ಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಹೊಸ ಬಸ್ ನಿಲ್ದಾಣದಲ್ಲಿರುವ ಮಹಿಳಾ ವಿಶ್ರಾಂತಿ ಕೇಂದ್ರವನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು ಎಂದು ಒತ್ತಾಯಿಸಲಾಯಿತು.
ಕಾಸರಗೋಡು ಸೇವಾ ಸಹಕಾರಿ ಬ್ಯಾಂಕ್‍ನ'ಪಿ.ರಾಘವನ್ ಸ್ಮಾರಕ ಸಭಾಂಗಣ'ದಲ್ಲಿ ನಡೆದ ಸಮ್ಮೇಳನವನ್ನು ರಾಜ್ಯ ಸಮಿತಿ ಸದಸ್ಯೆ ಪಿ. ಬೇಬಿ ಉದ್ಘಾಟಿಸಿದರು. ಎಂ. ಲಲಿತಾಕೆ ಅಧ್ಯಕ್ಷತೆ ವಹಿಸಿದ್ದರು. ಜಯಕುಮಾರಿ ಚಟುವಟಿಕೆ ವರದಿ ಮಂಡಿಸಿದರು. ಜಿಲ್ಲಾ ಕಾರ್ಯದರ್ಶಿ ಎಂ.ಸುಮತಿ, ಗೀತಾ ಸಾಮಾನಿ, ಜಯಂತಿ, ಎಂ.ಕೆ.ರವೀಂದ್ರನ್, ಕೆ.ಸುಮತಿ ಉಪಸ್ಥಿತರಿದ್ದರು. ಟಿ. ಬಾಲಕೃಷ್ಣ ಸ್ವಾಗತಿಸಿದರು. ಸಂಘಟನೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಕೆ ಎಸ್ ರೀನಾ ಅಧ್ಯಕ್ಷೆ, ಪಿ ಜಾನಕಿ, ಅಖಿಲಾ ರೈ ಉಪಾಧ್ಯಕ್ಷರು, ಸಿ ಶಾಂತಕುಮಾರಿ ಕಾರ್ಯದರ್ಶಿ, ಕೆ ಇಂದಿರಾ, ಓಮನಾ ಜತೆಕಾರ್ಯದರ್ಶಿ ಹಾಗೂ ಎಂ ಬಿಂದು ಅವರನ್ನು ಕೋಶಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಯಿತು.





