ಮಂಜೇಶ್ವರ: ಬಾಳಿಯೂರು ಶ್ರೀ ಅಯ್ಯಪ್ಪ ಭಜನಾ ಮಂದಿರದ ವತಿಯಿಂದ ಸನಾತನ ಭಾರತೀಯ ಸಂಸ್ಕಾರ ಹಾಗೂ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಹಾಗೂ ಧರ್ಮ ಸಂರಕ್ಷಣೆಯನ್ನು ಮಾಡುವ ಉದ್ದೇಶದೊಂದಿಗೆ ಮಕ್ಕಳಿಗೆ ಯೋಗ, ಭಗವದ್ಗೀತೆ ಶ್ಲೋಕ, ಕುಣಿತ ಭಜನೆ, ಆಟಗಳು ಹಾಗೂ ಪುರಾಣ ಕಥೆಗಳನ್ನು ಕಲಿಸುವ ನಿಟ್ಟಿನಲ್ಲಿ ಶ್ರೀ ಅಯ್ಯಪ್ಪ ಕೃಪಾ ಬಾಲಗೋಕುಲವನ್ನು ಆರಂಭಿಸಲಾಯಿತು.
ಸಮಾರಂಭವನ್ನು ಭಾನುವಾರ ಸಂಜೆ ವೇದಮೂರ್ತಿ ಬಾಲಕೃಷ್ಣ ಭಟ್ ದಡ್ಡಂಗಡಿ ಉದ್ಘಾಟಿಸಿ, ಮಕ್ಕಳಿಗೆ ಹಿಂದೂ ಧರ್ಮ ಹಾಗೂ ಸಂಸ್ಕಾರ, ಸಂಸ್ಕøತಿಗಳ ಬಗ್ಗೆ ಸಮಗ್ರ ತಿಳುವಳಿಕೆ ಮೂಡಿಸಬೇಕು. ಈ ಮೂಲಕ ಸಶಕ್ತ ರಾಷ್ಟ್ರ ನಿರ್ಮಾಣದ ಸಂಕಲ್ಪ ಕೈಗೊಳ್ಳಬೇಕು. ಅಲ್ಲದೆ ಸನಾತನ ಧರ್ಮದ ಪುನರುದ್ಧಾರಕ್ಕೆ ಕೈಜೋಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಆರ್‍ಎಸ್‍ಎಸ್‍ನ ಪ್ರಮುಖರಾದ ಸದಾಶಿವ ಕಡಂಬಾರು, ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ವಸಂತ ಭಟ್ ತೊಟ್ಟೆತೋಡಿ, ಅರವಿಂದಾಕ್ಷ ಭಂಡಾರಿ ದಡ್ಡಂಗಡಿ, ಮಂದಿರದ ಗುರುಸ್ವಾಮಿ ರಾಧಾಕೃಷ್ಣ ರೈ ಹೊಸಮನೆ ಸಹಿತ ಅನೇಕ ಮಂದಿ ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಕ್ಕಳ ಸಾಂಸ್ಕøತಿಕ ಬೆಳವಣಿಗೆಗೆ ಬಾಲಗೋಕುಲದಂತಹ ವೇದಿಕೆ ಅತ್ಯಂತ ಅಗತ್ಯವೆಂದು ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.




.jpg)
