ಕಾಸರಗೋಡು: ಕೇರಳ ಸರ್ಕಾರದ ಜನವಿರೋಧಿ ಧೋರಣೆ ಖಂಡಿಸಿ ಹಾಗೂ ವಿವಿಧ ಬೇಡಿಕೆ ಮುಂದಿರಿಸಿ ಸೆ. 17ರಿಂದ ಆ. 10ರ ವರೆಗೆ ರಾಜ್ಯ ವ್ಯಾಪಕವಾಗಿ ಭಾರತೀಯ ಮಜ್ದೂರ್ ಸಂಘ್(ಬಿಎಂಎಸ್)ವತಿಯಿಂದ ಜಿಲ್ಲೆಯ ಎಲ್ಲಾ ಪಂಚಾಯಿತಿಗಳು, ನಗರಸಭೆ ಹಾಗೂ ಮಹಾನಗರಪಾಲಿಕೆಗಳಲ್ಲಿಪಾದಯಾತ್ರೆ ಹಮ್ಮಿಕೊಳ್ಳಲಿರುವುದಾಗಿ ಬಿಎಂಎಸ್ ಜಿಲ್ಲಾ ಸಮಿತಿ ಅಧ್ಯಕ್ಷ ಉಪೇಂದ್ರ ಕೋಟೆಕಣಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೆಲೆಯೇರಿಕೆ ತಡೆಗಟ್ಟಬೇಕು, ಕ್ಷೇಮನಿಧಿ ಪಿಂಚಣಿ ಮೊತ್ತ 1600ರೂ.ನಿಂದ ಆರು ಸಾವಿರಕ್ಕೇರಿಸಬೇಕು, ತಲೆಹೊರೆ ಕಾರ್ಮಿಕರ ಉದ್ಯೋಗ ಮತ್ತು ವೇತನ ಸಂರಕ್ಷಿಸಬೇಕು, ಸ್ಕೀಂ ಕಾರ್ಮಿಖರನ್ನು ಸರ್ಕಾರಿ ಉದ್ಯೋಗಿಗಳನ್ನಾಗಿ ಪರಿಗಣಿಸಬೇಕು, ಉದ್ಯೋಗಖಾತ್ರಿ ಕಾರ್ಮಿಕರಿಗೆ ಕೇಂದ್ರ ನೀಡುವ ಮೊತ್ತಕ್ಕೆ ಸಮಾನವಾದ ಮೊತ್ತವನ್ನು ರಾಜ್ಯ ಸರ್ಕಾರವೂ ನೀಡಿ ಕನಿಷ್ಠ ವೇತನ ಜಾರಿಗೊಳಿಸಬೇಕು ಮುಂತಾದ26 ಬೇಡಿಕೆ ಮುಂದಿರಿಸಿ ಪಾದಯಾಥ್ರೆ ನಡೆಯಲಿದೆ.
ಬೆಲೆಯೇರಿಕೆಯಿಂದ ಜನಸಾಮಾನ್ಯರ ಜೀವನ ಸಂಕಷ್ಟದಿಂದ ಕೂಡಿದ್ದು, ಬೆಲೆಯೇರಿಕೆ ನಿಯಂತ್ರಿಸುವಲ್ಲಿ ವಿಫಲವಾಘಿರುವ ಸರ್ಕಾರದ ಧೋರಣೆ ವಿರುದ್ಧ ಬಿಎಂಎಸ್ ಧ್ವನಿಯೆತ್ತಲಿದೆ. ಕಾಸರಗೋಡಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಬಗ್ಗೆ ತೋರುವ ನಿರ್ಲಕ್ಷ್ಯ ಧೋರಣೆ ಕೈಬಿಟ್ಟು ಶೀಘ್ರ ಕೆಲಸ ಪೂರ್ತಿಗೊಳಿಸಲು ಸರ್ಕಾರ ಮುಂದಾಗಬೇಕು ಎಂದು ತಿಳಿಸಿದರು. ಸುದ್ದಿಗೋಷ್ಠೀಯಲ್ಲಿ ಬಾಬು ಕೆ.ವಿ, ಭರತನ್ ಕಲ್ಯಾಣ್ ರೋಡ್, ದಿನೇಶ್ ಬಂಬ್ರಾಣ, ಗೀತಾಬಾಲಕೃಷ್ಣನ್ ಉಪಸ್ಥಿತರಿದ್ದರು.




