ಕಾಸರಗೋಡು: ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವಠಾರದ ಬಾಲಗೋಕುಲ ವತಿಯಿಂದ ನಡೆದ ಶ್ರೀಕೃಷ್ಣ ಜಯಂತ್ಯುತ್ಸವ ಭವ್ಯ ಶೋಭಾಯಾತ್ರೆಯೊಂದಿಗೆ ಸಂಪನ್ನಗೊಂಡಿತು. ಕಾರ್ಯಕ್ರಮದ ಅಂಗವಾಗಿ ಮೊಸರುಕುಡಿಕೆ ಸೇರಿದಂತೆ ವಿವಿಧ ಸ್ಪರ್ಧೆ ನಡೆಯಿತು.
ಮಧ್ಯಾಹ್ನ ಕೊರಕ್ಕೋಡು ಶ್ರೀ ಆರ್ಯಕಾತ್ರ್ಯಾಯಿನಿ ಕ್ಷೇತ್ರ ವಠಾರದಿಂದ ಆರಂಭಗೊಂಡ ಶ್ರೀಕೃಷ್ಣ-ರಾಧೆಯರ ವೇಷಧಾರಿಗಳನ್ನೊಳಗೊಂಡ ಭವ್ಯ ಶೋಭಾಯಾಥ್ರೆ ಕಾಸರಗೋಡು ನಗರದ ಪ್ರಧಾನ ಅಂಚೆ ಕಚೇರಿ, ಕೆ.ಪಿ.ಆರ್ ರಾವ್ ರೋಡ್, ಬ್ಯಾಂಕ್ ರಸ್ತೆ ಹಾದಿಯಾಗಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತಲುಪಿತು. ಈ ಸಂದರ್ಭ ನಡೆದ ಸಮಾರಂಭದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಬಾಲದಿನಾಚರಣೆ ಸಮಿತಿ ಅಧ್ಯಕ್ಷ ಸತೀಶ್ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಡಾ. ಅಜಯ್ ಕುಮಾರ್ ಬಹುಮಾನ ವಿತರಿಸಿದರು.





