ಬದಿಯಡ್ಕ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿದ್ದು, ಜಾಮೀನು ಪಡೆದ ನಂತರ ತಲೆಮರೆಸಿಕೊಂಡಿದ್ದ ನಾರಂಪಾಡಿ ನಿವಾಸಿ ಅಬ್ದುಲ್ ರಜಾಕ್ ಎಂಬಾತನನ್ನು ಬದಿಯಡ್ಕ ಠಾಣೆ ಎಎಸ್‍ಐ ಮಹಮ್ಮದ್ ನೇತೃತ್ವದ ಪೊಲೀಸರ ತಂಡ ಅಜ್ಮೀರ್‍ನಿಂದ ಬಂಧಿಸಿ ಕರೆತಂದಿದ್ದಾರೆ.
2023ರಲ್ಲಿ ಬದಿಯಡ್ಕ ಠಾಣೆಯಲ್ಲಿ ದಾಖಲಾಗಿರುವ 'ಪೋಕ್ಸೋ'ಪ್ರಕರಣದಲ್ಲಿ ಅಬ್ದುಲ್ ರಜಾಕ್ ಆರೋಪಿಯಾಗಿದ್ದು, ನಂತರ ನ್ಯಾಯಾಲಯದಿಂದ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದನು. ನಂತರ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಈತನಿಗೆ ನಿರಂತರ ವಾರಂಟ್ ಹೊರಡಿಸಿದರೂ, ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಈತನನ್ನು ತಲೆಮರೆಸಿಕೊಂಡಿರುವ ಆರೋಪಿಯಾಗಿ ಪರಿಗಣಿಸಲಾಗಿತ್ತು. ಈತನ ಪತ್ತೆಗಾಗಿ ಹುಡುಕಾಟ ನಡೆಸುವ ಮಧ್ಯೆ, ಅರೋಪಿ ವೇಷಪಲ್ಲಟಗೊಳಿಸಿ ಅಜ್ಮೀರ್‍ನಲ್ಲಿ ವಾಸಿಸುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಎಸ್‍ಐ ಮಹಮ್ಮದ್ ಜತೆಗೆ ಸಿಪಿಓಗಳಾದ ಗೋಕುಲ್ ಹಾಗೂ ಶ್ರಿನೇಶ್ ಕಾರ್ಯಾಚರಣೆಗೆ ಸಹಕರಿಸಿದ್ದರು.




