ಪೆರ್ಲ: ಶುಳುವಾಲಮೂಲೆ ಶ್ರೀ ಸದನದಲ್ಲಿ ಶರನ್ನವರಾತ್ರಿ ಮಹೋತ್ಸವ ಇಂದಿನಿಂದ ಅ.2ರ ವರೆಗೆ ವಿವಿಧ ವೈದಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಇಂದು ಬೆಳಿಗ್ಗೆ ಬ್ರಹ್ಮಶ್ರೀ ಶಿವಸುಬ್ರಹ್ಮಣ್ಯ ಅವರಿಂದ ಮಹಾಗಣಪತಿ ಹವನದೊಂದಿಗೆ ಉತ್ಸವ ಚಾಲನೆಗೊಳ್ಳಲಿದೆ.
ಸೆ.22, 23ರಂದು ಸಂಜೆ 6.30ರಿಂದ ಯಕ್ಷಗಾನ ಬಯಲಾಟ, ಸೆ.24 ರಂದು ಸಂಜೆ 6.30 ರಿಂದ ಭಜನೆ, ಸೆ. 25 ರಂದು ಸಂಜೆ 6.30 ರಿಂದ ಯಕ್ಷಗಾನ, ಸೆ. 26 ರಂದು ಲಲಿತಾ ಪಂಚಮಿ ಪ್ರಯುಕ್ತ ಲಲಿತಾ ಸಹಸ್ರನಾಮ, ಸಂಜೆ 6.30 ರಿಂದ ಭಜನೆ, ಸೆ.27 ರಂದು ಸಂಜೆ 6.30 ರಿಂದ ಸಂಗೀತ ಕಛೇರಿ, ಸೆ.28 ರಂದು ಸಂಜೆ 6.30 ರಿಂದ ಯಕ್ಷಗಾನ ಬಯಲಾಟ, ಸೆ. 29 ರಂದು ಸಂಜೆ 6.30 ರಿಂದ ಭಜನೆ, 30 ರಂದು ಸಂಜೆ 6 ರಿಂದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಅ.1 ರಂದು ಮಹಾ ನವಮಿ ಪ್ರಯುಕ್ತ ಬೆಳಗ್ಗೆ 8 ರಿಂದ ಚಂಡಿಕಾ ಹವನ, ಭಜನೆ, 11.30ಕ್ಕೆ ಹವನದ ಪೂರ್ಣಾಹುತಿ, ಆಯುಧಪೂಜೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ರಾತ್ರಿ 7 ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ರಾತ್ರಿ 9.30ಕ್ಕೆ ಮಂಗಳಾರತಿ, ಅಷ್ಟಾವಧಾನ ಸೇವೆ, ಪ್ರಸಾದ ವಿತರಣೆ, ಸೆ. 2ರಂದು ವಿಜಯ ದಶಮಿ ಆಚರಣೆ ಜರಗಲಿದೆ.





