ಬದಿಯಡ್ಕ: ಕೇರಳ ಪೆನ್ಷನರ್ಸ್ ಸಂಘ್ ಕುಂಬ್ಡಾಜೆ ಚೆಂಗಳ ಘಟಕದ ಮಹಾಸಭೆ ಮವ್ವಾರು ಷಡಾನನ ವಾಚನಾಲಯದ ಸಭಾಂಗಣದಲ್ಲಿ ಜರಗಿತು. ಘಟಕದ ಅಧ್ಯಕ್ಷ ಗಣಪತಿ ಭಟ್ ವಳಕ್ಕುಂಜ ಅಧ್ಯಕ್ಷತೆ ವಹಿಸಿದ್ದರು. ಕೆಎಸ್‍ಪಿಎಸ್‍ನ ರಾಜ್ಯಸಮಿತಿ ಸದಸ್ಯ ಶ್ರೀಧರ ಭಟ್, ಪ್ರಾಂತ್ಯ ಕಾರ್ಯಕಾರಿ ಸಮಿತಿ ಸದಸ್ಯ ಈಶ್ವರ ರಾವ್, ಕಾಸರಗೋಡು ಜಿಲ್ಲಾ ಸಮಿತಿಯ ಅಧ್ಯಕ್ಷ ನಾಗರಾಜ ಭಟ್, ಜಿಲ್ಲಾ ಕಾರ್ಯದರ್ಶಿ ಕುಂಞಂಬು ಮಾಸ್ತರ್ ಉಪಸ್ಥಿತರಿದ್ದರು. ಸಂಘಟನೆಗೆ ನವಾಗತರಾದ ಗೋಪಾಲಕೃಷ್ಣ ಭಟ್ ಪನೆಯಾಲ ಮತ್ತು ಕಲಾವತಿ ಟೀಚರ್ ಅಗಲ್ಪಾಡಿ ಅವರನ್ನು ಸ್ವಾಗತಿಸಿ ಅಭಿನಂದಿಸಲಾಯಿತು. ಜಿಲ್ಲಾ ಸಮಿತಿಯ ನಿರ್ಣಯದಂತೆ ಬ್ಲಾಕ್ ಸಮಿತಿಯ ಸದಸ್ಯರನ್ನು ಆರಿಸಲಾಯಿತು. ಕುಂಬ್ಡಾಜೆ ಚೆಂಗಳ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಅಧ್ಯಕ್ಷರಾಗಿ ಕೃಷ್ಣೋಜಿ ರಾವ್, ಉಪಾಧ್ಯಕ್ಷರಾಗಿ ಗಣಪತಿ ಭಟ್, ಕಾರ್ಯದರ್ಶಿಯಾಗಿ ವಿಷ್ಣು ಭಟ್, ಜೊತೆಕಾರ್ಯದರ್ಶಿಗಳಾಗಿ ವಿಶಾಲಾಕ್ಷಿ, ಪಾರ್ವತಿ, ಕಲಾವತಿ ಹಾಗೂ ಸುಬ್ರಹ್ಮಣ್ಯ ಭಟ್, ಗೋಪಾಲಕೃಷ್ಣ ಭಟ್ ಇವರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆರಿಸಲಾಯಿತು. ಸೀತಾರಾಮ ಭಟ್ ಸ್ವಾಗತಿಸಿ, ಅನ್ನಪೂರ್ಣ ಪ್ರಾರ್ಥನೆ ಹಾಡಿದರು.




.jpg)
