ಬದಿಯಡ್ಕ: ಶ್ರೀಕ್ಷೇತ್ರ ಧರ್ಮಸ್ಥಳದ ಮಹಿಮೆ ಹಾಗೂ ಪರಂಪರೆ ಸಂರಕ್ಷಿಸುವ ಉದ್ದೇಶದಿಂದ ಕ್ಷೇತ್ರದ ವಿರುದ್ಧ ಮಾನಹಾನಿಕರ ಚಟುವಟಿಕೆಗಳ ವಿರುದ್ಧ ಶ್ರೀ ಎಡನೀರು ಮಠದ ವತಿಯಿಂದ 'ಕ್ಷೇತ್ರ ರಕ್ಷಾ ಯಾತ್ರೆ-ವಾಹನ ಜಾಥಾ'ರ್ಖಖೇ ಆರ್ಧಧುಋಈ ಭೇಮಭಳ ಧೋಋಖೀಥೂ.
ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ನೇತೃತ್ವದಲ್ಲಿ ಸೋಮವಾರ ಶ್ರೀಮಠದ ವಠಾರದಿಂದ ಆರಂಭಗೊಂಡ ಯಾಥ್ರೆಯಲ್ಲಿ ನೂರಾರು ಮಂದಿ ಭಕ್ತಾದಿಗಳು ಪಾಲ್ಗೊಂಡಿದ್ದರು.
ಉಪ್ಪಳ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ಚೀಮೇನಿ ಅವಧೂತಾಶ್ರಮದ ಸಾಧು ವಿನೋದ ಸ್ವಾಮೀಜಿ, ವಿವಿಧ ಸಂಘಟನೆ ಮುಖಂಡರು, ಶ್ರೀ ಮಠದ ಹಾಗೂ ಧರ್ಮಸ್ಥಳದ ಭಕ್ತಾದಿಗಳು ಸ್ವಾಮೀಜಿ ಅವರ ವಾಹನವನ್ನು ಹಿಂಬಾಲಿಸಿದರು. ಕಾಸರಗೋಡು, ಕುಂಬಳೆ, ಉಪ್ಪಳ, ಮಂಜೇಶ್ವರ-ಉದ್ಯಾವರ, ತಲಪ್ಪಾಡಿ ಹಾದಿಯಾಗಿ ಪಂಪ್‍ವೆಲ್ ಸಾಗಿ ಅಲ್ಲಿಂದ ಬಂಟ್ವಾಳ, ಬೆಳ್ತಂಗಡಿ, ಉಜಿರೆ ಮೂಲಕ ಧರ್ಮಸ್ಥಳ ತಲುಪಿತ್ತು.





