ಕುಂಬಳೆ: ಆರಿಕ್ಕಾಡಿ ಕಾರ್ಳೆ ಶ್ರೀಕಾಳಿಕಾಂಬ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಸೋಮವಾರ ಆರಂಭಗೊಂಡಿದ್ದು, ಅ.2ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಸೋಮವಾರ ಶ್ರೀ ಕ್ಷೇತ್ರದಲ್ಲಿ ಬೆಳಿಗ್ಗೆ ಶ್ರೀಗುರು ಮಹಾಗಣಪತಿ ಪೂಜೆ, ಸ್ವಸ್ತಿಪುಣ್ಯಾಹ, ನವಗ್ರಹಪೂಜೆ, ಕಲಶ ಪ್ರತಿಷ್ಠೆ, ಶ್ರೀಮಹಾಗಣಪತಿ ಹೋಮ, ಪಂಚಾಮೃತ ಅಭಿಷೇಕ, ಮಹಾಭಿಷೇಕ, ಪೂಜೆ, ಲಲಿತ ಸಹಸ್ರನಾಮ ಪಾರಾಯಣ, ಭಜನೆ, ಮದ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಅಪರಾಹ್ನ ದೀಪಾರಾಧನೆ, ವೇದಸೂಕ್ತ ಪಾರಾಯಣ, ಭಜನೆ, ರಾತ್ರಿ 8.ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.
ಇಂದು(ಮಂಗಳವಾರ) ಬೆಳಿಗ್ಗೆ 9 ರಿಂದ 10ರ ತನಕ ಶ್ರೀ ಹನುಮ ಭಕ್ತ ಭಜನಾ ಸಂಘ ಅರಿಕ್ಕಾಡಿ, *11 ರಿಂದ 12 ರ ತನಕ ಶ್ರೀಕಾಳಿಕಾಂಬ ಮಹಿಳಾ ಭಜನಾ ಸಂಘ ಅರಿಕ್ಕಾಡಿ, ಸಂಜೆ 6.30 ರಿಂದ 8.ರ ತನಕ ಶ್ರೀಕಾಳಿಕಾಂಬ ಭಜನಾ ಸಂಘ ಅರಿಕ್ಕಾಡಿ ಅವರಿಂದ ಭಜನಾ ಸಂಕೀರ್ತನಾ ಸೇವೆ ನಡೆಯಲಿದೆ.




.jpg)
