ಕುಂಬಳೆ: ಶ್ರೀ ಪುಷ್ಪಕ ಬ್ರಾಹ್ಮಣ ಸೇವಾಸಂಘದ ರಾಷ್ಟ್ರೀಯ ಸಮ್ಮೇಳನ ಎರ್ನಾಕುಳಂ ತ್ರಿಪೂಣಿತ್ತರ ಶ್ರೀಪೂರ್ಣ ಸಭಾಂಗಣದಲ್ಲಿ ಭಾನುವಾರ ಜರಗಿತು. ಪ್ರತಿನಿಧಿ ಸಮ್ಮೇಳನವನ್ನು ಪ್ರೊ. ಸರಿತಾ ಅಯ್ಯರ್ ಉದ್ಘಾಟಿಸಿದರು. ಸಂಘದ ಕೇಂದ್ರಾಧ್ಯಕ್ಷ ಎಲ್.ಪಿ. ವಿಶ್ವನಾಥನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಕೆ. ಎಲ್. ಕೃಷ್ಣನ್ ನಂಬೀಶನ್, ಡಾ.ಪ್ರದೀಪ್ ಜ್ಯೊತಿ, ಪಿ.ಆರ್. ಹರಿ, ಕೆ.ಎಂ. ದೇವಕಿ ಕುಟ್ಟಿ, ಎಂ.ಬಿ. ಬಾಲಮುರಳಿ ಮೊದಲಾದವರು ಮಾತನಾಡಿದರು.
ಕಾಸರಗೋಡಿನಿಂದ ಹದಿನೈದು ಮಂದಿ, ಕಾಇಂಗಾಡಿನಿಂದ ಅರುವತ್ತು ಮಂದಿ ವಿಶೇಷ ಪ್ರತಿನಿಧಿಗಳಾಗಿ ಒಟ್ಟು ಎರಡು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ವಿಕಾಸ್ ಆರ್.ಡಿ. ಅಧ್ಯಕ್ಷತೆಯಲ್ಲಿ ಬಾಲೋತ್ಸವ ನಡೆಯಿತು. ಡಾ. ರಮ್ಯಾ ವಿಕಾಸ್, ಅಶ್ವಿನಿ ರಾಮಕೃಷ್ಣನ್, ದೀಪೇಶ್ ದರ್ಶನ್ ಭಾಗವಹಿಸಿದ್ದರು. ಮುಂದಿನ ಯೋಜನೆಗಳ 'ವಿಶನ್ 2030' ಸಂಘದ ಕೇಂದ್ರ ಉಪಾಧ್ಯಕ್ಷ ಪಿ.ವಿ. ಸುಧೀರ್ ನಂಬೀಶನ್ ಅಧ್ಯಕ್ಷತೆಯಲ್ಲಿ ನಡೆಯಿತು. ಮಾಜಿ ಅಧ್ಯಕ್ಷ ಡಾ ಪಿ. ಗೋಪಿನಾಥನ್ ಉದ್ಘಾಟಿಸಿದರು.




.jpg)
