ಮಧೂರು: ಮಧೂರು ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ ಓಪರೇಟಿವ್ ಸೊಸೈಟಿ ಎಸ್ಸೆಲ್ಸಿ, ಪ್ಲಸ್ ಟು ತರಗತಿಗಳಲ್ಲಿ ಉತೀರ್ಣರಾದ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಗೌರವಿಸಲು ತೀರ್ಮಾನಿಸಿದೆ. ಸಂಘದ ಎ ಕ್ಲಾಸ್ ಸದಸ್ಯರ ಮಕ್ಕಳಿಗೆ 2024-25 ರಲ್ಲಿ ಎಸ್ಸೆಲ್ಸಿ, ಪ್ಲಸ್ ಟು ತರಗತಿಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಲಭಿಸಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ನಗದು ಬಹುಮಾನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ತಮ್ಮ ಒಂದು ಪಾಸ್ ಪೋರ್ಟ್ ನಮೂನೆ ಪೋಟೋ ಹಾಗು ಶಾಲಾ ಮುಖ್ಯಸ್ಥರಿಂದ ದೃಡೀಕರಿಸಿದ ಸರ್ಟಿಫಿಕೇಟ್ ನೊಂದಿಗೆ ಸೆ.24 ಬುಧವಾರ ಸಂಜೆ 5ಕ್ಕೆ ಮುಂಚಿತವಾಗಿ ಉಳಿಯತ್ತಡ್ಕದಲ್ಲಿರುವ ಸಂಘದ ಕಚೇರಿಯಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.





