ಕಾಸರಗೋಡು: ರಾಜ್ಯದಲ್ಲಿ ಅಮೀಬಿಕ್ ಮಸ್ತಿಷ್ಕ ಜ್ವರ ಬಾಧೆಯ ಪ್ರಕರಣ ಹೆಚ್ಚುತ್ತಿರುವುದರಿಂದ, ಜಿಲ್ಲೆಯಲ್ಲಿ ರೋಗ ತಡೆಗಟ್ಟುವ ಚಟುವಟಿಕೆಗಳನ್ನು ತೀವ್ರಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಆ. ಆಗಸ್ಟ್ 30ರಿಂದ ಸರಣಿ ಚಟುವಟಿಕೆ ಆರಂಭಿಸಲಾಗಿದ್ದು, ಈ ಮೂಲಕ ಕುಡಿಯುವ ನೀರಿನ ಮೂಲಗಳಾದ ತೆರೆದ ಬಾವಿ, ಕೆರೆಗಳಿಗೆ ಕ್ಲೋರಿನೇಷನ್ ಅಭಿಯಾನ ಆರಂಭಿಸಲಾಯಿತು. ಅಭಿಯಾನದ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಕಾಲಿಕ್ಕಡವಿನಲ್ಲಿ ಪಿಲಿಕ್ಕೋಡ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಸನ್ನಕುಮಾರಿ ಉಸ್ಘಾಟಿಸಿದರು.
ಗ್ರಾಮ ಪಂಚಾಯಿತಿ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷೆ ವಿ.ವಿ. ಸುಲೋಚನಾ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ. ಎ.ವಿ. ರಾಮದಾಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಗ್ರಾಮ ಪಂಚಾಯಿತಿ ಸದಸ್ಯ ವಿ. ಪ್ರದೀಪನ್ ಮತ್ತು ರೇಷ್ಮಾ ಪಿ ಉಪಸ್ಥಿತರಿದ್ದರು. ಜಿಲ್ಲಾ ಮಾಸ್ ಮಿಡಿಯಾ ಅಧಿಕಾರಿ ಅಬ್ದುಲ್ ಲತೀಫ್ ಮಠತ್ತಿಲ್ ಸ್ವಾಗತಿಸಿದರು. ಆರೋಗ್ಯ ನಿರೀಕ್ಷಕ ಪಿ.ವಿ. ಮಹೇಶ್ ಕುಮಾರ್ ವಂದಿಸಿದರು.
ಬಾವಿ ನೀರಿನ ಮೂಲಕವೂ ರೋಗ ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಅಭಿಯಾನದ ಮೂಲಕ ಮನೆಗಳು ಮತ್ತು ಸಂಸ್ಥೆಗಳಲ್ಲಿರುವ ಎಲ್ಲಾ ಬಾವಿಗಳಿಗೆ ಕ್ಲೋರಿನೇಷನ್ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 137836 ಬಾವಿಗಳಿದ್ದು, ಆಶಾ ಕಾರ್ಯಕರ್ತರು, ಕುಟುಂಬಶ್ರೀ ಕಾರ್ಯಕರ್ತರು ಮತ್ತು ಇತರ ಸ್ವಯಂಸೇವಾ ಸಂಸ್ಥೆಗಳ ಕಾರ್ಯಕರ್ತರನ್ನು ಬಳಸಿಕೊಂಡು ಕ್ಲೋರಿನೇಷನ್ ನಡೆಸಲಾಗುತ್ತಿದೆ.
ನಿಂತ ನೀರಿನಲ್ಲಿ ಈಜುವುದು ಮತ್ತು ಡೈವಿಂಗ್ ಮಾಡುವುದನ್ನು ತಪ್ಪಿಸಬೇಕು, ವಾಟರ್ ಥೀಮ್ ಪಾರ್ಕ್‍ಗಳು ಮತ್ತು ಈಜುಕೊಳಗಳಲ್ಲಿ ಕ್ಲೋರಿನೇಟೆಡ್ ನೀರನ್ನು ಬಳ ನೀರಿನ ಮೂಲಗಳಲ್ಲಿ ಸ್ನಾನ ಮಾಡುವಾಗ ಮೂಗಿಗೆ ನೀರು ಹೋಗದಂತೆ ಎಚ್ಚರವಹಿಸಬೇಕು, ಕಲುಷಿತ ನೀರಿನಲ್ಲಿ ಸ್ನಾನ ಮಾಡುವುದು, ಮುಖ ಮತ್ತು ಬಾಯಿಯನ್ನು ತೊಳೆಯುವುದನ್ನು ತಪ್ಪಿಸಬೇಕು ಹಾಗೂ ಕ್ಲೋರಿನೇಷನ್ ನಡೆಸಿದ ಬಾವಿ ನೀರನ್ನು ಬಳಸುವ ಮುಲಕ ಅಭಿಯನಕ್ಕೆ ಜನತೆ ತಮ್ಮ ಸಂಪೂರ್ಣ ಸಹಕಾರ ನೀಡಬೇಕು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ. ಎ. ವಿ. ರಾಮದಾಸ್ ತಿಳಿಸಿದ್ದಾರೆ.





