HEALTH TIPS

ಪದ್ಮಗಿರಿ ಕಲಾಕುಟೀರದಲ್ಲಿ 'ಆಕಾಶದಿಂದ ಪಾತಾಳಕ್ಕೆ' ಕಥಾ ಸಂಕಲನ ಬಿಡುಗಡೆ ಸಮಾರಂಭ

ಕಾಸರಗೋಡು: ಖ್ಯಾತ ಕಥೆಗಾರ ಸಾಹಿತಿ ವೈ. ಸತ್ಯನಾರಾಯಣ ಅವರ 'ಆಕಾಶದಿಂದ ಪಾತಾಳಕ್ಕೆ' ಕಥಾ ಸಂಕಲನದ ಬಿಡುಗಡೆ ಸಮಾರಂಭ ಕಾಸರಗೋಡು ಕರಂದಕ್ಕಾಡಿನ ಪದ್ಮಗಿರಿ ಕಲಾ ಕುಟೀರದಲ್ಲಿ ಜರುಗಿತು. ಕಾಸರಗೋಡಿನ ಸಾಹಿತ್ಯಿಕ, ಸಾಂಸ್ಕøತಿಕ ಸಂಸ್ಥೆಯಾದ ರಂಗ ಚಿನ್ನಾರಿಯ ಸಹಯೋಗದೊಂದಿಗೆ  ಕಾರ್ಯಕ್ರಮ ಆಯೋಜಿಸಲಾಗಿತ್ತು.  

ಚಿತ್ರನಟ, ರಂಗಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಮನಸ್ಸಿನಲ್ಲಿ ಅನುರಣಿಸುವಂತಹ ಕತೆಗಳನ್ನು ನೀಡಿರುವ ವೈ. ಸತ್ಯನಾರಾಯಣ ಅವರು ತಮ್ಮ ಬಹುತೇಕ ಕೃತಿಗಳಲ್ಲಿ ಸರಳತೆ ಹಾಗೂ ಅಚ್ಚುಕಟ್ಟುತನವನ್ನು ನಿರೂಪಿಸಿಕೊಂಡು ಬಂದಿದ್ದಾರೆ. ಕತೆಗಳೋಓನ್ನು ಅತ್ಯಂತ ಸರಳ ಹಾಗೂ ಸುಂದರವಾಗಿ ನಿರೂಪಿಸುವ ತಂತ್ರಗಾರಿಕೆಯುಳ್ಳ ಇವರು ತಮ್ಮ 85ನೆಯ ಹರೆಯದಲ್ಲೂ ಬರೆಯುವ ಛಾತಿ ಯುವ ಪೀಲಿಗೆಗೆ ಆದರ್ಶಪ್ರಾಯರಾಗಿದ್ದಾರೆ ಎಂದು ತಿಳಿಸಿದರು. ನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ್ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು.  

ಡಾ. ಪ್ರಮೀಳ ಮಾಧವ್ ಕೃತಿಪರಿಚಯ ನೀಡಿ, ವೈ. ಸತ್ಯನಾರಾಯಣ ಅವರ ಕಥೆಗಳು ಪ್ರಸಕ್ತ ಸಮಾಜದಲ್ಲಿನ ಪ್ರಚಲಿತ ವಿದ್ಯಮಾನಗಳ ಕಡೆಗೆ ಬೆಳಕು ಚೆಲ್ಲುತ್ತಿದ್ದು,  ಈ ಕೃತಿಯಲ್ಲಿ ನಿರೂಪಿತವಾದ ಬಹುತೇಕ ಕಥೆಗಳಲ್ಲಿ ಮಾನವೀಯತೆ, ಕೃತಜ್ಞತೆ, ಆತ್ಮಾಭಿಮಾನದ ಚಿತ್ರಣ ಮನಸ್ಸಿಗೆ ನಾಟುವಂತಿದೆ ಎಂದು ತಿಳಿಸಿದರು.

ಬರಹಗಾರ, ಉಪನ್ಯಾಸಕ ಟಿ. ಎ. ಎನ್. ಖಂಡಿಗೆ,  ನಿವೃತ್ತ ಪ್ರಾಧ್ಯಾಪಕ ಪಿ. ಎನ್. ಮುಡಿತ್ತಾಯ  ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.  ಈ ಸಂದರ್ಭ ಕಥಾ ಸಂಕಲನಕ್ಕೆ ಮುಖಪುಟ ರಚಿಸಿದ ಖ್ಯಾತ ಕಾರ್ಟೂನಿಸ್ಟ್, ಲೇಖಕ ಬಾಲ ಮಧುರಕಾನನ ದಂಪತಿಯನ್ನು ಲೇಖಕ ವೈ. ಸತ್ಯನಾರಾಯಣ ಹಾಗೂ ಮಾಲತಿ ಎಸ್. ಜಿ. ಅವರು ಶಾಲು ಹೊಂದಿಸಿ ಸ್ಮರಣಿಕೆ ನೀಡಿ ಗೌರವಿಸಿದರು  ಖ್ಯಾತ ಸಾಹಿತಿ, ನಾಟಕಕಾರ ರಾಂ ಎಲ್ಲಂಗಳ ಉಪಸ್ಥಿತರಿದ್ದರು.  ರಂಗ ಚಿನ್ನಾರಿ ಸಂಸ್ಥೆಯ ವತಿಯಿಂದ ಲೇಖಕ ವೈ. ಸತ್ಯನಾರಾಯಣ ಅವರಿಗೆ ಶಾಲು ಹೊಂದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಸ್ವರ ಚಿನ್ನಾರಿಯ ಬಬಿತ ಆಚಾರ್ಯ ಪ್ರಾರ್ಥಿಸಿದರು.  ಕೆ. ಸತೀಶ್ಚಂದ್ರ  ಭಂಡಾರಿ ಸ್ವಾಗತಿಸಿದರು. ನಾರಿ ಚಿನ್ನಾರಿಯ ಸರ್ವಮಂಗಳ ಟೀಚರ್ ಕಾರ್ಯಕ್ರಮ ನಿರೂಪಿಸಿದರು. ಜನಾರ್ದನ ಅಣಂಗೂರು ವಂದಿಸಿದರು



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries