ಪೆರ್ಲ: ಎಣ್ಮಕಜೆ ಪಂಚಾಯಿತಿ ಬಂಟ್ಸ್ ಸರ್ವೀಸ್ ಸೊಸೈಟಿ ವತಿಯಿಂದ ಬಂಟರ ಕೂಟ ಕಾರ್ಯಕ್ರಮ ಸೆ. 14ರಂದು ಪೆರ್ಲ ಸನಿಹದ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಲ್ತಿ)ವಿಷ್ಣುಮೂರ್ತಿ ದೇವಸ್ಥಾನದ ಸಭಾಂಗಣದಲ್ಲಿ ಜರುಗಲಿದೆ.
ಬೆಳಗ್ಗೆ 9ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಭಜನೆ ನಡೆಯುವುದು. 11ರಿಂದ ಸಭಾ ಕಾರ್ಯಕ್ರಮ ನಡೆಯುವುದು. ಕಾಸರಗೋಡು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ವಕೀಲ ಐ. ಸುಬ್ಬಯ್ಯ ರೈ ಉದ್ಘಾಟಿಸುವರು. ಯುಎಇ ಮನಿ ಎಕ್ಸ್‍ಚೇಂಜ್ ಮಾಜಿ ಅಧ್ಯಕ್ಷ ಸುಧೀರ್‍ಕುಮಾರ್ ಶೆಟ್ಟಿ ಎಣ್ಮಕಜೆ ಅಧ್ಯಕ್ಷತೆ ವಹಿಸುವರು.ಕೊಡುಗೈದಾನಿ, ಉದ್ಯಮಿ, ಢ. ಸದಾಶಿವ ಶೆಟ್ಟಿ ಕುಳೂರುಕನ್ಯಾನ, ಮುಂಡಪಳ್ಳ ಶ್ರೀ ರಾಜರಾಜೇಶ್ವರೀ ದೇವಸ್ಥಾನ ಆಡಳಿತ ಮೊಕ್ತೇಸರ, ಉದ್ಯಮಿ ಕೆ.ಕೆ ಶೆಟ್ಟಿ, ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು. ಬೆಂಗಳೂರು ಬಂಟರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯೆ ಶೋಭಾ ಶೇಖ ಅತಿಥಿಯಾಗಿ ಭಾಗವಹಿಸುವರು. ಈ ಸಂದರ್ಭ ಗೌರವಾರ್ಪಣೆ, ಪ್ರತಿಭಾ ಪುರಸ್ಕಾರ, ಸಾಂಸ್ಕøತಿಕ ಕಾರ್ಯಕ್ರಮ, ಒಳಾಂಗಣ ಕ್ರೀಡಾ ಸ್ಪರ್ಧೆ, ಸಂಜೆ 5ರಿಂದ ಬಂಟ ಬಾಂಧವರಿಂದ "ಶ್ರೀದೇವೀ ಲೀಲಾಮೃತ'ಯಕ್ಷಗಾನ ಬಯಲಾಟ ಜರುಗಲಿರುವುದು.




