HEALTH TIPS

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅಸೌಖ್ಯಪೀಡಿತರಿಗೆ ಸಲಕರಣೆ ವಿತರಣೆ

ಕುಂಬಳೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಂಜೇಶ್ವರ ತಾಲೂಕಿನ ಕುಂಬ್ಳೆ ವಲಯದ ವತಿಯಿಂದ ಅಸೌಖ್ಯಪೀಡಿತರಿಗೆ ಗಾಲಿಕುರ್ಚಿ ಹಾಗೂ ಇತರ ಪರಿಕರ ವಿತರಿಸಲಾಯಿತು. 

ದಂಡೆಗೋಳಿ ಗ್ರಾಮದ ಯಮುನಾ g ಹಾಗೂ ಕಿದೂರು ಗ್ರಾಮದ ರಾಮಕ್ಕ ಅವರಿಗೆ ಯೋಜನೆಯ ಜನಮಂಗಲ ಕಾರ್ಯಕ್ರಮದಡಿಯಲ್ಲಿ ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆ ಅವರು ಮಂಜೂರು ಮಾಡಿರುವ ಔಟ್ ಸೈಡ್ ವೀಲ್ ಚೇರ್ ಹಾಗೂ ಯು ಶೇಪ್ ವಾಕರ್ ಸಲಕರಣೆಯನ್ನು ವಿತರಣೆ ಮಾಡಲಾಯಿತು. ಈ ಸಂದರ್ಭ ಮಂಜೇಶ್ವರ ತಾಲೂಕು ಯೋಜನಾಧಿಕಾರಿಗಳಾದ ಶಶಿಕಲಾ ಸುವರ್ಣ, ಜನ ಜಾಗೃತಿ ವೇದಿಕೆ ಕುಂಬ್ಳೆ ವಲಯದ ಅಧ್ಯಕ್ಷ ಮಹೇಶ್ ಪುಣಿಯೂರು, ವಲಯದ ಮೇಲ್ವಿಚಾರಕರಾದ ಅಭಿಷೇಕ್. ಡಿ, ನಾರಾಯಣ, ಸೇವಾಪ್ರತಿನಿಧಿ ಸರಿತಾ ಮೊದಲಾದವರು ಉಪಸ್ಥಿತರಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries