ಸಮರಸ ಚಿತ್ರಸುದ್ದಿ: ಮಧೂರು: ಯಕ್ಷಗಾನ ಕ್ಷೇತ್ರಕ್ಕೆ ವಿಶ್ವವಿದ್ಯಾಲಯದಂತಿರುವ ಶ್ರೀ ಇಡುಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ (ರಿ.) ಇದರ ನಿರ್ದೇಶಕರು,ಹಿರಿಯ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ-ರಾಜೇಶ್ವರಿ ಶಿವಾನಂದ ಹೆಗಡೆ ಅವರು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನಕ್ಕೆ ಭೇಟಿ ನೀಡಿ ಯಕ್ಷಗಾನ ಮ್ಯೂಸಿಯಂ ಸಂದರ್ಶಿಸಿದರು.





