ಮಂಜೇಶ್ವರ: ಸ್ಥಳೀಯರಿಗೆ ತೊಂದರೆಯಾಗುವ ಅನಧಿಕೃತ ಮೀನು ಸಂಸ್ಕರಣ ಫ್ಯಾಕ್ಟರಿ ಮುಚ್ಚಬೇಕೆಂದು ಬಿಜೆಪಿ ಮಂಜೇಶ್ವರ ಪಂಚಾಯತಿ ಸಮಿತಿ ಅಗ್ರಹಿಸಿದೆ.
ಕಣ್ವತೀರ್ಥ ರಾಮಾಡಿಯಲ್ಲಿ ಕಾರ್ಯನಿರ್ವಹಿಸುವ ಪಂಚಾಯತಿ ಲೈಸನ್ಸ್ ನವಿಕರಣ ಮಾಡದ, ಅರೋಗ್ಯ ಇಲಾಖೆ ಅನುಮತಿ ನೀಡದ ಫ್ಯಾಕ್ಟರಿಯಿಂದ ಊರಿನ ಜನತೆಗೆ ಸಾಂಕ್ರಾಮಿಕ ರೋಗ, ದುರ್ವಾಸನೆ ಜೊತೆಗೆ ಸಮೀಪದ ಬಾವಿಗಳಿ ನೀರು ಕಲುಷಿತಗೊಂಡು ಉಪಯೋಗ್ಯ ಶೂನ್ಯವಾಗಿದೆ ಎಂದು ಬಿಜೆಪಿ ಮಂಜೇಶ್ವರ ಪಂಚಾಯತಿ ಸಮಿತಿ ಆರೋಪಿಸಿದೆ.
ನಾಗರಿಕರು ಬೃಹತ್ ಸಂಖ್ಯೆಯಲ್ಲಿ ಈಗಾಗಲೇ ಪ್ರತಿಭಟನೆ ಮಾಡಿರುತ್ತಾರೆ. ಆದರೆ ಉನ್ನತ ಮಟ್ಟದ ಒತ್ತಡದಿಂದ ಅಧಿಕೃತ ಮೀನು ಘಟಕ ಇನ್ನೂ ಕಾರ್ಯಾಚರಿಸುತ್ತಿದೆ. ಮಂಜೇಶ್ವರ ಶಾಸಕರ ನೈತಿಕ ಬೆಂಬಲ ಈ ಅಧಿಕೃತ ಫ್ಯಾಕ್ಟರಿ ಕಾರ್ಯಾಚರಣೆ ಹಿಂದಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ಈಗಾಗಲೇ ಪಂಚಾಯತಿಯು ಫ್ಯಾಕ್ಟರಿ ನಿರ್ವಹಣಗೆ ತಡೆ ನೋಟಿಸು ನೀಡಿದರೂ ಕಾರ್ಖಾನೆ ರಾತ್ರಿ ಕಾಲದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಕೂಡಲೇ ಸ್ಥಳೀಯಾಡಳಿತ, ಜಿಲ್ಲಾಧಿಕಾರಿ, ಹಾಗೂ ಅರೋಗ್ಯ ಇಲಾಖೆ ಈ ಅನಧಿಕೃತ ಕಾರ್ಖಾನೆ ಮುಚ್ಚದಿದ್ದರೆ ಬಿಜೆಪಿ ಜನತೆಯ ಜೊತೆ ನಿಂತು ಮುಂದಿನ ಕಾರ್ಯಯೋಜನೆಯಂತೆ ಹೋರಾಟಕ್ಕೆ ತಯಾರಿ ನಡೆಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.




