ಮುಳ್ಳೇರಿಯ: ಮಿಂಚಿಪದವು ಶ್ರೀ ಕಾವೇರಮ್ಮ ಮಹಾಲಿಂಗೇಶ್ವರ ಕ್ಷೇತ್ರದ ನೂತನ ಭೋಜನ ಶಾಲೆಯ ಶಿಲಾನ್ಯಾಸ ಕಾರ್ಯಕ್ರಮ ಬ್ರಹ್ಮಶ್ರೀ ವಾಸುದೇವ ತಂತ್ರಿಗಳ ಉಪಸ್ಥಿತಿಯಲ್ಲಿ ರಮಾದೇವಿ ಮತ್ತು ಲಕ್ಷ್ಮಿ ನಾರಾಯಣರಾವ್ ಪಡುಮಲೆ, ಮಂಗಳೂರು ದಂಪತಿ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಲಕ್ಷ್ಮೀನಾರಾಯಣ ರಾವ್ ಅವರು ಊರ ಪರವೂರಿನ ಭಕ್ತಾದಿಗಳು ಕೈಜೋಡಿಸಿ ದೇವರ ಸೇವೆ ಮಾಡೋಣ. ಆದಷ್ಟು ಶೀಘ್ರ ಶ್ರೀ ಕಾವೇರಮ್ಮ ಮಹಾಲಿಂಗೇಶ್ವರ ಕ್ಷೇತ್ರ ಜೀರ್ಣೋದ್ಧಾರ ಕೈಗೂಡಿ ಬ್ರಹ್ಮಕಲಶೋತ್ಸವ ಕಾಣುವಂತಾಗಲಿ ಎಂದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ, ಬ್ರಹ್ಮಕಲಶ ಸಮಿತಿಯ ಅಧ್ಯಕ್ಷ ಮಧುಸೂಧನ ಆಯರ್ ಮಂಗಳೂರು ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಆಶೀರ್ವಚನ ನೀಡಿದರು. ಲಕ್ಷ್ಮೀನಾರಾಯಣ ರಾವ್ ದಂಪತಿಗಳು, ಸಮಿತಿಯ ಕಾರ್ಯಾಧ್ಯಕ್ಷ ವಕೀಲ. ದಾಮೋದರನ್ ಶುಭಾಶಂಸನೆಗೈದರು. ಕಾರ್ಯಕ್ರಮದಲ್ಲಿ ಎನ್. ರಾಮಚಂದ್ರ, ರಾಘವ ಎಂ.ಎನ್, ಗೀತಾ ದಾಮೋದರನ್, ಜಯಕರ, ಮನೋಜ್ ಎಂ.ಸಿ. ಮುಂತಾದವರು ಉಪಸ್ಥಿತರಿದ್ದರು. ವಕೀಲ. ಶಿವರಾಮ ಮಣಿಯಾಣಿ ಸ್ವಾಗತಿಸಿ, ಚಂದ್ರಶೇಖರ ಎಂ.ಎನ್. ವಂದಿಸಿದರು. ಜೀರ್ಣೋದ್ಧಾರ ಬ್ರಹ್ಮಕಲಶ ಸಮಿತಿ ಖಜಾಂಜಿ ನಾರಾಯಣ ಕೇಕಡ್ಕ ಕಾರ್ಯಕ್ರಮ ನಿರೂಪಿಸಿದರು.




.jpg)
