ಉಪ್ಪಳ: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ-ಕೇರಳ ಮತ್ತು ಗ್ರಾಮೀಣ ಆಶ್ರಮ ಪೆರ್ನಾಲು ಉಡುಪಿ ಜಂಟಿ ಆಶ್ರಯದಲ್ಲಿ 'ಕೊರಗ ಮಹಿಳೆಯರ ಸಬಲೀಕರಣ' ಕಾರ್ಯಗಾರ ಪೈವಳಿಕೆ ಕುಟುಂಬಶ್ರೀ ಸಭಾಂಗಣದಲ್ಲಿ ಜರುಗಿತು.
ಮಾನಸಿಕ ಸ್ಥೆರ್ಯ ಅಚಲವಾದಾಗ ದಲಿತರು ಬಲಿತರಾಗುತ್ತಾರೆ. ಮುಂದಿನ ಜನಾಂಗವನ್ನು ಉನ್ನತ ವಿದ್ಯಾಭ್ಯಾಸವೆಂಬ ಅಸ್ತ್ರದಿಂದ ಬಲಿಷ್ಠವಾಗಿ ಕಟ್ಟಲು ಸಂಘಟನೆ ಅಡಿಪಾಯವನ್ನು ಹಾಕಬೇಕಿದೆ. ಪ್ರಸ್ತುತ ಸಮಾಜದೊಂದಿಗೆ ಸ್ಪರ್ಧಾತ್ಮಕವಾಗಿ ಸೆಟೆದು ನಿಲ್ಲಬೇಕು. ಡಾ. ಬಿ.ಆರ್ ಅಂಬೇಡ್ಕರರ ಆಶಯಗಳನ್ನು ಮುಖ್ಯ ಭೂಮಿಕೆಯಾಗಿ ಸ್ವೀಕರಿಸಿ ಮೂಲ ನಿವಾಸಿಗಳ ಧ್ವನಿ ಮಾರ್ಧನಿಸಲಿ ಎಂದು ರಂಗಕರ್ಮಿ, ಚಿಣ್ಣರ ಚಿಲುಮೆ ಸಂಘಟಕ ಸಮಿತಿ ಕಾಸರಗೋಡು ನಿರ್ದೇಶಕ ಶಿಕ್ಷಕ ಅಶೋಕ್ ಕೊಡ್ಲಮೊಗರು ಉದ್ಘಾಟಿಸಿ ಕರೆ ನೀಡಿದರು.
ಸೇವಾ ನಿರತ ಸಮುದಾಯದ ಕಾರ್ಯಕರ್ತರಾದ ಗೋಪಾಲ ಕಾರ್ಯಾಡ್ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಸಂಪನ್ಮೂಲ ವ್ಯಕ್ತಿಯಾಗಿ ರಂಗ ನಿರ್ದೇಶಕ, ಶಿಕ್ಷಕ ಉದಯ ಸಾರಂಗ್ ಮಹಿಳೆಯರ ಸಬಲೀಕರಣ ಕಾರ್ಯಾಗಾರವನ್ನು ವಿವಿಧ ಮನೋರಂಜನೆ ಮನೋವೈಜ್ಞಾನಿಕತೆಯ ಮೂಲಕ ನಡೆಸಿಕೊಟ್ಟರು. ಸೇರಿದ್ದ ಮಹಿಳೆಯರು ಉತ್ಸಾಹದಾಯಕವಾಗಿ ಪಾಲ್ಗೊಂಡು ಯಶಸ್ವಿಗೊಳಿಸಿದರು.




.jpg)
