ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ.ಜನರು ಉತ್ತಮ ಬ್ಯಾಟರಿ ಬಾಳಿಕೆ ಹೊಂದಿರುವ ಸ್ಮಾರ್ಟ್‌ಫೋನ್ ಗಳನ್ನೇ ಖರೀದಿಸಲು ಇಷ್ಟಪಡುತ್ತಾರೆ. ಫೋನಿನ ಬ್ಯಾಟರಿ ಬಾಳಿಕೆ ಚೆನ್ನಾಗಿ ಇದ್ದರೆ ಅದನ್ನು ದೀರ್ಘಕಾಲದವರೆಗೆ ಬಳಸಬಹುದು.
ಫೋನ್ ಅನ್ನು ಪದೇ ಪದೇ ಚಾರ್ಜ್ ಮಾಡುವ ಅಗತ್ಯ ಇರುವುದಿಲ್ಲ.ಆದರೆ ಕೆಲವು ಸೆಟ್ಟಿಂಗ್‌ಗಳನ್ನು ಬದಲಾಯಿಸುವ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಅವಧಿಯನ್ನು ಹೆಚ್ಚಿಸಬಹುದು.ನಿಮ್ಮ ಫೋನಿನಲ್ಲಿ ಈ ಸೆಟ್ಟಿಂಗ್ ಆಫ್ ಆಗಿದ್ದರೆ ಫೋನಿನ ಬ್ಯಾಟರಿ ಲೈಫ್ ಕೂಡಾ ಹೆಚ್ಚಾಗುವುದು.
ಮೊಬೈಲ್ನಲ್ಲಿ ಬ್ಯಾಟರಿ ಖಾಲಿಯಾಗುತ್ತಿದ್ದಂತೆ ಏನೋ ಕಳೆದುಕೊಂಡ ಭಾವನೆ ಬಂದು ಬಿಡುತ್ತದೆ.. ಹೀಗಾಗಿ ಹಲವರು ಸಿಕ್ಕಸಿಕ್ಕ ಚಾರ್ಜರ್ ಗಳಲ್ಲಿ ತಮ್ಮ ಮೊಬೈಲ್ ಫೋನ್ ಚಾರ್ಜ್ ಹಾಕಿಕೊಂಡು ಒಟ್ಟಾರೆ ಮೊಬೈಲ್ ಚಾರ್ಜ್ ಆದರೆ ಸಾಕು ಎನ್ನುವ ಭಾವನೆ ಬೆಳೆಸಿಕೊಂಡು ಬಿಡುತ್ತಾರೆ.. ಆದರೆ ಹೀಗೆ ಸಿಕ್ಕ ಸಿಕ್ಕ ಮೊಬೈಲ್ ಚಾರ್ಜರ್ ಬಳಕೆ ಮಾಡುವುದು ಹೆಚ್ಚು ಅಪಾಯಕಾರಿ.. ಜೊತೆಗೆ ನಿಮ್ಮ ಮೊಬೈಲ್ ದೀರ್ಘಕಾಲದವರೆಗೆ ಬಾಳಿಕೆ ಬರಬೇಕು ಅಂದರೆ ಹಲವಾರು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು.. ಅದು ಏನು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
1) ಬೇರೆ ಚಾರ್ಜರ್ ಬಳಕೆ ಮಾಡಬೇಡಿ: ನಿಮ್ಮ ಫೋನ್ ನಲ್ಲಿ ಬ್ಯಾಟರಿ ಕಾಲಿ ಆಯಿತು ಎಂದು ಬೇರೆ ಸ್ಮಾರ್ಟ್ ಫೋನ್ ಚಾರ್ಜರ್ ಬಳಕೆ ಮಾಡುವ ಕೆಲಸ ಮಾಡಬೇಡಿ..ಸಿಕ್ಕಸಿಕ್ಕ ಮೊಬೈಲ್ ಕಂಪನಿ ಚಾರ್ಜರ್ ಬಳಕೆ ಮಾಡುವುದರಿಂದ ನಿಮ್ಮ ಫೋನಿನ ಬ್ಯಾಟರಿ ಬಾಳಿಕೆ ಧಕ್ಕೆ ಆಗುವ ಸಾಧ್ಯತೆ ಇರುತ್ತದೆ.ನೀವು ಬೇರೆ ಸ್ಮಾರ್ಟ್ ಫೋನ್ ಚಾರ್ಜರ್ ಬಳಕೆ ಮಾಡಿ ನಿಮ್ಮ ಮೊಬೈಲ್ ಚಾರ್ಜ್ ಹಾಕುವುದರಿಂದ ನಿಮ್ಮ ಫೋನು ಹೆಚ್ಚು ಬಿಸಿ ಆಗುವ ಸಂಭವ ಇರುತ್ತದೆ.
2)ಮುಂಜಾನೆವರೆಗೂ ಚಾರ್ಜ್ ಇಡಬೇಡಿ: ಬಹುತೇಕ ಬಳಕೆದಾರರಿಗೆ ರಾತ್ರಿಯಿಡಿ ಫೋನ್ ಚಾರ್ಜ್ ಹಾಕಿ ಮಲಗುವ ಅಭ್ಯಾಸ ಇರುತ್ತದೆ. ಆದರೆ ಖಂಡಿತಾ ಇದು ಉತ್ತಮ ಆಯ್ಕೆ ಅಲ್ಲವೇ ಅಲ್ಲ. ಆ ರೀತಿ ಓವರ್ ಚಾರ್ಜ್ ಮಾಡುವುದರಿಂದ ಫೋನ್ ಬ್ಯಾಟರಿ ಬಾಳಿಕೆ ಕುಗ್ಗುವುದರಲ್ಲಿ ಅನುಮಾನವೇ ಬೇಡ. ಹೀಗಾಗಿ ರಾತ್ರಿಯಿಡಿ ಚಾರ್ಜ್ ಮಾಡಬೇಡಿರಿ.
3)ಚಾರ್ಜಿಂಗ್ ಮಾಡುವಾಗ ಫೋನ್ ಬಳಸಬೇಡಿ: ಅನೇಕರು ಮಾಡುವ ತಪ್ಪು ಕೆಲಸಗಳಲ್ಲಿ ಒಂದು ಅಂದರೆ ಫೋನ್ ಚಾರ್ಜ್ ಮಾಡುವಾಗ ಬಳಸುವುದು.. ಫೋನ್ ಚಾರ್ಜ್ ಮಾಡುತ್ತಾ ಬಳಕೆಯ ಮಾಡಿರುವುದರಿಂದ ಅನೇಕ ಅಪಾಯಗಳು ಸಂಭವಿಸಿರುವ ಅರಿವಿದ್ದರೂ ಕೆಲವರು ಫೋನ್ ಚಾರ್ಜ್ ಮಾಡುತ್ತಲೇ ಫೋನ್ ಬಳಕೆ ಮಾಡುತ್ತಿರುತ್ತಾರೆ..ಹೀಗೆ ಮಾಡುವುದರಿಂದ ನಿಮ್ಮ ಫೋನ್ ಅತಿಯಾಗಿ ಬಿಸಿಯಾಗಿ ಅಪಾಯಕಾರಿ ಆಗಬಹುದು.. ಹೀಗಾಗಿ ನಿಮಗೆ ಫೋನ್ ಚಾರ್ಜ್ ಮಾಡುವ ವೇಳೆ ಬಳಕೆ ಮಾಡುತ್ತಾ ಅಥವಾ ಇನ್ನೊಬ್ಬರೊಂದಿಗೆ ಮಾತನಾಡುವ ದುರಭ್ಯಾಸ ಇದ್ದರೆ ಈಗಲೇ ಬಿಟ್ಟು ಬಿಡಿ..
4)ಎಷ್ಟು ಬಾರಿ ಫೋನ್ ಚಾರ್ಜ್ ಮಾಡಬೇಕು: ಕೆಲವರು ಸ್ವಲ್ಪ ಚಾರ್ಜ್ ಖಾಲಿಯಾಗುತ್ತಿದ್ದಂತೆ ಮೊಬೈಲ್ ಚಾರ್ಜ್ ಮಾಡುವ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ.. ಫೋನ್ನಲ್ಲಿ ಸ್ವಲ್ಪ ಮೊಬೈಲ್ ಚಾರ್ಜ್ ಖಾಲಿಯಾಗುತ್ತಿದ್ದಂತೆ ಏನೋ ಕಳೆದುಕೊಂಡ ಭಾವನೆ ಬೆಳೆಸಿಕೊಂಡು ಸದಾಕಾಲ ತಮ್ಮ ಫೋನ್ ಚಾರ್ಜ್ ಇಟ್ಟುಕೊಂಡಿರುತ್ತಾರೆ.. ದಿನಕ್ಕೆ ಎರಡರಿಂದ ಮೂರು ಬಾರಿ ಮೊಬೈಲ್ ಚಾರ್ಜ್ ಮಾಡುವುದರಿಂದ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ..ಇನ್ನೂ . ಸಾಧ್ಯವಾದಷ್ಟು ಫೋನ್ ಬ್ಯಾಟರಿಯನ್ನು 60% ನಿಂದ 75% ಪರ್ಸೆಂಟ್ ನಡುವೆ ಇರುವಂತೆ ನೋಡಿಕೊಳ್ಳಿ, ಅದಾಗ್ಯೂ ಚಾರ್ಜ್ ಅನಿವಾರ್ಯ ಎಂದಾಗ ಚಾರ್ಜ್ ಮಾಡಿ ಆದರೆ ಪದೇ ಪದೇ ಚಾರ್ಜ್ ಅಂತೂ ಮಾಡಲೆಬೇಡಿ.ನಿಮ್ಮ ಫೋನ್ ಪದೇಪದೇ ಚಾರ್ಜ್ ಮಾಡುವುದರಿಂದ ನಿಮ್ಮ ಬ್ಯಾಟರಿ ಹಾಳಾಗುವ ಸಾಧ್ಯತೆ ಇರುತ್ತದೆ.
5)ಪೂರ್ಣ ಚಾರ್ಜ್ ಮಾಡದಿರಿ: ಕೆಲವರ ಮೊಬೈಲಲ್ಲಿ ಶೇಕಡಾ ನೂರರಷ್ಟು ಚಾರ್ಜ್ ಮಾಡಿದ್ರೆ ತೃಪ್ತಿ ಎನ್ನುವ ಭಾವನೆ ಇರುತ್ತದೆ. ಹೀಗಾಗಿಯೇ ಬ್ಯಾಟರಿ 100 ಆಗುವವರೆಗೂ ತೆಗೆಯುವುದೇ ಇಲ್ಲ..ಆದ್ರೆ ಇದು ಬ್ಯಾಟರಿ ಲೈಫ್ ದೃಷ್ಟಿಯಿಂದ ಉತ್ತಮ ನಿರ್ಧಾರವಲ್ಲ. ಫುಲ್ 100% ಚಾರ್ಜ್ ಮಾಡಲೇಬೇಡಿ. 90ರ ಗಡಿ ಮುಟ್ಟಿದ್ದರೇ ಸಾಕು. ಈ ಕ್ರಮ ಫೋನಿನ ಬ್ಯಾಟರಿ ಬಾಳಿಕೆಯನ್ನು ಹೆಚ್ಚಿಸುತ್ತವೆ.
6)ಫೋನ್ ಬ್ಯಾಟರಿ ಬಣಗಲು ಬಿಡಬೇಡಿ: ಇನ್ನು ಇನ್ನೂ ಕೆಲವರಿಗೆ ಮತ್ತೊಂದಷ್ಟು ದುರಭ್ಯಾಸ ಇರುತ್ತದೆ.. ಮೊಬೈಲ್ ನಲ್ಲಿ ಚಾರ್ಜ್ ಸಂಪೂರ್ಣ ಕಾಲಿ ಆಗುವವರೆಗೂ ಚಾರ್ಜ್ ಹಾಕುವ ಅಭ್ಯಾಸವೇ ಇರುವುದಿಲ್ಲ.. ನಿಮ್ಮ ಫೋನ್ ಉತ್ತಮ ಸ್ಥಿತಿಯಲ್ಲಿ ಕಾರ್ಯನಿರ್ವಹಣೆ ಮಾಡಬೇಕು ಎಂದರೆ ಫೋನ್ ಬ್ಯಾಟರಿ ಸಂಪೂರ್ಣ ಕಾಲಿ ಆಗಲು ಬಿಡಬೇಡಿ… ಹೀಗಾಗಿ ಫೋನ್ ಬ್ಯಾಟರಿ ಯಾವತ್ತು ಡ್ರೈ ಆಗಲು ಬಿಡಲೇಬೇಡಿ. ಶೇ.30% ಸನಿಹ ಬಂದಾಗ ಚಾರ್ಜ್ ಮಾಡುವುದು ಉತ್ತಮ.




