ಬದಿಯಡ್ಕ: ಪಡ್ರೆ ನಿವಾಸಿ, ಬದಿಯಡ್ಕದಲ್ಲಿ ವಾಸ್ತವ್ಯವಿರುವ ಉಪೇಂದ್ರ ಆಚಾರ್ಯ(71) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ನಿಧನರಾದರು. ಚಿನ್ನಾಭರಣ ಕೆಲಸ ನಿರ್ವಹಿಸುತ್ತಿದ್ದ ಇವರು, ಉತ್ತಮ ರಂಗ ನಟರಾಗಿದ್ದರು. ದೇಶ ಮಂಗಲದ ಗಾಯತ್ರೀ ಕಲಾ ವೃಂದದಲ್ಲಿ ರಂಗ ಕಲಾವಿದರಾಗಿ ಹಲವಾರು ಪಾತ್ರಗಳನ್ನು ನಿರ್ವಹಿಸಿದ್ದರು. ಅವರು ಪತ್ನಿ, ಐವರು ಮಕ್ಕಳನ್ನು ಅಗಲಿದ್ದಾರೆ.





