ಕಾಸರಗೋಡು: ಈದ್ ಮಿಲಾದುನ್ನಬಿ ಹಬ್ಬವನ್ನು ಜಿಲ್ಲಾದ್ಯಂತ ಭಕ್ತಿ ಸಂಭ್ರಮದಿಂದ ಶುಕ್ರವಾರ ಆಚರಿಸಲಾಯಿತು. ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ, ಮದ್ರಸಾ ವಿದ್ಯಾರ್ಥಿಗಳಿಗಾಗಿ ವಿಶೇಷ ಸ್ಪರ್ಧೆಗಳು, ದಫ್‍ಮುಟ್ ಒಳಗೊಂಡಂತೆ ಈದ್ ರ್ಯಾಲಿ ನಡೆಯಿತು. ಶಾಂತಿದೂತ ಮಹಮ್ಮದ್ ನೆಬಿ ಅವರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರತಿಜ್ಞೆಯೊಂದಿಗೆ ನಾನಾ ಕಡೆ ಮಸೀದಿ ಹಾಗೂ ಮಹಲ್ ಸಮಿತಿಗಳಲ್ಲಿ ನೆಬಿದಿನ ಸಂದೇಶ ರ್ಯಾಲಿ ಆಯೋಜಿಸಲಾಗಿತ್ತು.
ಕಾಸರಗೋಡಿನ ತಳಂಗರೆ ಮಾಲಿಕ್‍ದೀನಾರ್ ಮಸೀದಿಯಲ್ಲಿ ಮದ್ರಸಾ ವಿದ್ಯಾರ್ತಿಗಳು ನಡೆಸಿಕೊಟ್ಟ ದಫ್‍ಮುಟ್ಟ್, ನೆಬಿದಿನ ಸಂದೇಶ ಯಾತ್ರೆ ಗಮನ ಸೆಳೆಯಿತು. ಮಂಜೇಶ್ವರ ಉದ್ಯಾವರ ಸಾವಿರ ಜಮಾಅತ್ ಮಸೀದಿಯಲ್ಲಿ ನಬಿದಿನ ಸಂದೇಶ ಯಾತ್ರೆ ನಡೆಯಿತು. ಪ್ರವಾದಿ ಮುಹಮ್ಮದ್ (ಸ) ಜನ್ಮದಿನಾಚರಣೆ ಈದ್‍ಮಿಲಾದ್ ಅಂಗವಾಗಿ ಪುತ್ತಿಗೆ ಕಟ್ಟತ್ತಡ್ಕ ಮುಹಿಮ್ಮತ್‍ನಲ್ಲಿ ಮಿಲಾದ್ ರ್ಯಾಲಿ ನಡೆಯಿತು. ಕಾಸರಗೋಡು ನೆಲ್ಲಿಕುಂಜೆ ಮುಹಿಯುದ್ದೀನ್ ಜುಮಾ ಮಸೀದಿ, ತೆರುವತ್ ಜುಮಾ ಮಸೀದಿ ಸೇರಿದಂತೆ ಜಿಲ್ಲೆಯ ನಾನಾ ಕಡೆ ಈದ್ ಮಿಲಾದುನ್ನಬಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.





