ಕಾಸರಗೋಡು :ಕಾಸರಗೋಡು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೇತೃತ್ವದಲ್ಲಿ 70ನೇ ವರ್ಷದ ಆಚರಣೆ-ಸಪ್ತತಿ ಮಹೋತ್ಸವದ ಸಮಾರೋಪ ಸಮಾರಂಬ ಸೆ. 6ರಂದು ಜರುಗಲಿದೆ. ಕಾರ್ಯಕ್ರಮದ ಅಂಗವಗಿ ಸೆ. 5ರಂದು ಮಧ್ಯಾಃನ 1ಗಂಟೆಗೆ ಗೀತಾಜ್ಞಾನ ಯಜ್ಞ ಕಾಸರಗೋಡು ಘಟಕ ವತಿಯಿಂದ ಭಗವದ್ಗೀತಾ ಪಾರಾಯಣ, ಸಂಜೆ 4.30ಕ್ಕೆ ಧಾರ್ಮಿಖ ಸಭೆ ನಡೆಯುವುದು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಕೇರಳ ಮಾನ್ಯ ಪ್ರಾಂತ ಸಂಘಚಾಲಕ್‍ವಕೀಲ ಕೆ.ಕೆ ಬಲರಾಮ್ ಅಧ್ಯಕ್ಷತೆ ವಹಿಸುವರು. ಬ್ರಹ್ಮಶ್ರೀ ಉಚ್ಚಿಲ ಶ್ರೀ ಪದ್ಮನಾಭ ತಂತ್ರಿ, ತಂತ್ರಿವರ್ಯರು ದಿವ್ಯ ಉಪಸ್ಥಿತರಿರುವರು. ಸಂಜೆ 7.15ರಿಂದ ಶಿವಾನಿ ಕೂಡ್ಲು ಅವರಿಂದ ಕೇರಳ ನಟನಂ ನೃತ್ಯ ಕಾರ್ಯಕ್ರಮ, 8ಕ್ಕೆ ಭರತನಾಟ್ಯ, 9ಕ್ಕೆ ಮಹಾಅಲಂಕಾರ ಪೂಜೆ, ರಂಗಪೂಜೆ ನಡೆಯುವುದು.
ಸೆ. 6ರಂದು ಮಧ್ಯಾಹ್ನ 12ರಿಂದಅಯುತ ನಾಳಿಕೇರ ಮಹಾಗಣಪತಿಯಾಗದ ಮಹಾಪೂರ್ಣಾಹುತಿ, 12.25ಕ್ಕೆ ಧಾರ್ಮಿಕ ಸಭೆ ನಡೆಯುವುದು. ಸಪ್ತತಿ ಮಹೋತ್ಸವ ಸಮಿತಿ ಅಧ್ಯಕ್ಷ ಸಿ. ವಿ. ಪೆÇದುವಾಳ್ ಅಧ್ಯಕ್ಷತೆ ವಹಿಸುವರು. ಕಾಸರಗೋಡು ಶ್ರೀ ಮಾತಾ ಅಮೃತಾನಂದಮಯಿ ಮಠದ ಬ್ರಹ್ಮ ವೇದ ವೇದ್ಯಾಮೃತ ಚೈತನ್ಯ ದಿವ್ಯ ಉಪಸ್ಥಿತರಿರುವರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ವಕೀಲ ಭರತ್‍ವೆಂಕಟೇಶ್ ಹಾಗೂ ಚಿತ್ರನಟ, ರಂಗಕಲಾವಿದ ಕಾಸರಗೋಡು ಚಿನ್ನಾ ಬಹುಮಾನ ವಿತರಿಸುವರು. ಸಂಜೆ 4ಕ್ಕೆ ಧ್ವಜಾವರೋಹಣ, ಮಹಾಪೂಜೆ ಶ್ರೀ ಮಹಾಗಣಪತಿಯ ವಿಗ್ರಹ ವಿಸರ್ಜನಾ ಮೆರವಣಿಗೆ ಆರಂಭಗೊಳ್ಳುವುದು. ಆ. 27ರಂದು ಸಪ್ತತಿ ಮಹೋತ್ಸವ ಆರಂಭಗೊಂಡಿದೆ.




