ಮುಳ್ಳೇರಿಯ: ಲಯನ್ಸ್ ಕ್ಲಬ್ ಮುಳ್ಳೇರಿಯ, ಕಯ್ಯಾರ ಕಿಞ್ಞಣ್ಣ ರೈ ಗ್ರಂಥಾಲಯ ಮುಳ್ಳೇರಿಯ, ಕಾಸರಗೋಡು ಜಿಲ್ಲಾ ರಸಪ್ರಶ್ನೆ ಸಂಘ ಸಂಯುಕ್ತವಾಗಿ ಭಾನುವಾರ ಆಯೋಜಿಸಿದ್ದ ಬೆಳೆಯುತ್ತಿರುವ ವಿಜ್ಞಾನ ಕ್ಷೇತ್ರಗಳು ಎಂಬ ವಿಷಯದಲ್ಲಿ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ಮುಳ್ಳೇರಿಯದ ಗ್ರಂಥಾಲಯದಲ್ಲಿ ಆಯೋಜಿಸಿತು. ಎ.ವಿ.ರವೀಂದ್ರನ್ ಪಯ್ಯನ್ನೂರು ರಸಪ್ರಶ್ನೆ ನಡೆಸಿಕೊಟ್ಟರು.
ಸ್ಪರ್ಧೆಯ ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಜಿಯಾ ಜಿತೇಶ್ ಮಾಣಿಯತ್ ಹಾಗೂ ದೇವನ್ ಪುಲ್ಲೂರ್(ಪ್ರಥಮ), ಅರ್ನವ್ ರಾಮ್ ನೀಲೇಶ್ವರ,ಸೂರ್ಯನಾರಾಯಣ ಕಲ್ಯಾಣ್ ರಸ್ತೆ(ದ್ವಿತೀಯ), ಅದ್ವಿಕ್ ಶಾಂತಿ ನಗರ, ತೇಜಸ್. ಬಿ ಕರ್ಮಂತೋಡಿ(ತೃತೀಯ), ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಶ್ರೀನಂದ್ ಎಸ್. ನಾಯರ್ ಪೂಂಗಚ್ಚಾಲ್, ಹರಿಗೋವಿಂದ್ ಸಿ ನೀಲೇಶ್ವರ(ಪ್ರಥಮ), ಅರ್ಜುನ್ ಕೊಟ್ಟೂರು, ಅಕ್ಷಯ್ ಮಾಧವ್ ಶಾಂತಿನಗರ(ದ್ವಿತೀಯ), ವೇದಸ್ಮೃತಿ ಕುಡುಂಬೂರು, ಸದಾಯ್ ಸುರೇಶ್ ಕುತ್ತಿಕೋಲ್(ತೃತೀಯ), ಹೈಸ್ಕೂಲ್ ವಿಭಾಗದಲ್ಲಿ ಅರ್ಜುನ್ ಎ.ಕೆ ಚೆಮ್ಮನಾಡ್, ಆದರ್ಶ್ ಮೋಹನ್ ಬೇತೂರ್ ಪಾರೆ(ಪ್ರಥಮ), ಅಶ್ವಿನ್‍ರಾಜ್ ನೀಲೇಶ್ವರ, ಅನನ್ಯಾ ಕಿನಾತ್ತಿಲ್(ದ್ವಿತೀಯ), ಶಶಿಕಲಾ ಸೀತಾಂಗೋಳಿ, ಅಮತ್ರ್ಯಸೇನ್ ಕುಂಬಳೆ(ತೃತೀಯ) ಮತ್ತು ಸಾಮಾನ್ಯ ವಿಭಾಗದಲ್ಲಿ ಸ್ವಾತಿ ಎಂ. ಕಾರಡ್ಕ, ಶೀತಲ್ ಎಂ.ಕಾರಡ್ಕ(ಪ್ರಥಮ), ಸುನಿಲ್ ಟಿ.ಕೆ., ಅಂಜಲಿ. ಕೆ. ನಾಯರ್ ಕುತ್ತಿಕೋಲ್(ದ್ವಿತೀಯ), ಶ್ರೀಯಾ ಸುನಿಲ್ ಬದಿಯಡ್ಕ, ಸುನ್ಮಿತ. ಸಿ ಬದಿಯಡ್ಕ(ತೃತೀಯ) ಸ್ಥಾನಗಳನ್ನು ಪಡೆದರು.
ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಮುಳ್ಳೇರಿಯ ಲಯನ್ಸ್ ಕ್ಲಬ್ ಅಧ್ಯಕ್ಷೆ ರಾಜಲಕ್ಷ್ಮಿ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಲೈಬ್ರರಿ ಕೌನ್ಸಿಲ್ ಸದಸ್ಯೆ ಜ್ಯೋತಿ ಪಾಣೂರು ಬಹುಮಾನ ವಿತರಿಸಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಶಾಫಿ ಚೂರಿಪಳ್ಳ, ವಿ. ತಂಬಾನ್, ಟಿ.ವಿ. ವಿಜಯನ್ ಮಾಸ್ತರ್, ಟಿ.ಎನ್. ಮೋಹನನ್, ವಿನೋದ್ ಮೇಲತ್, ಶೇಖರನ್ ನಾಯರ್ ಮಾತನಾಡಿದರು. ಕಯ್ಯಾರ ಕಿಞ್ಣಣ್ಣ ರೈ ಗ್ರಂಥಾಲಯದ ಕಾರ್ಯದರ್ಶಿ ಕೆ.ಕೆ. ಮೋಹನನ್ ಮಾಸ್ತರ್ ಸ್ವಾಗತಿಸಿ, ರಸಪ್ರಶ್ನೆ ಸಂಯೋಜಕ ಕೆ. ವಿಜಿತ್ ವಂದಿಸಿದರು.




.jpg)
.jpg)
.jpg)
