ಮಂಜೇಶ್ವರ: ಕ್ರೀಡೆಗಳು ಮಾನಸಿಕ ಸ್ಥೈರ್ಯದೊಂದಿಗೆ ಶಾರೀರಿಕ ದೃಢತೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ. ಆದ್ದರಿಂದ ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಕ್ರೀಡಾ ತರಬೇತಿ ಉತ್ತಮ ರೀತಿಯಲ್ಲಿ ಲಭಿಸಬೇಕು ಎಂದು ಬಾಕ್ರಬೈಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀನಿವಾಸ್ ರಾವ್ ತಿಳಿಸಿದರು.
ಅವರು ಬಾಕ್ರಬೈಲಲ್ಲಿ ಜರಗಿದ ಶಾಲಾ ಮಟ್ಟದ ಕ್ರೀಡೋತ್ಸವನ್ನು ಉದ್ಘಾಟಿಸಿ ಮಾತನಾಡಿದರು.
ಹಳೆ ವಿದ್ಯಾರ್ಥಿ ಹರಿಣಾಕ್ಷಿ ಟೀಚರ್ ಮಾತನಾಡಿ, ಕ್ರೀಡೆಗಳು ಮಾನಸಿಕ ಒತ್ತಡವನ್ನು ನಿಯಂತ್ರಿಸುವುದರೊಂದಿಗೆ ಉತ್ತಮ ಆರೋಗ್ಯವನ್ನು ನೀಡುತ್ತದೆ. ಆದ್ದರಿಂದ ಶಾಲಾ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಯಶಸ್ಸು ಗಳಿಸಿ ಎಂದು ಶುಭ ಹಾರೈಸಿದರು.
ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಅಶೋಕ್ ಕೊಡ್ಲಮೊಗರು ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮಾತೃ ಮಂಡಳಿ ಅಧ್ಯಕ್ಷೆ ಶೋಭಾ ಹಾಗೂ ಉಪಾಧ್ಯಕ್ಷೆ ಭವ್ಯಶ್ರೀ , ಪಿಟಿಎ ನಿಕಟಪೂರ್ವ ಅಧ್ಯಕ್ಷರಾದ ಅಶ್ರಫ್, ಸದಸ್ಯರಾದ ವೀಣಾ, ಹೇಮಲತಾ, ವಿಮಲ, ನಿರ್ಮಲ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಮಕ್ಕಳ ಆಕರ್ಷಕ ಪಥ ಸಂಚಲನ ಜರಗಿತು. ಮುಖ್ಯ ಶಿಕ್ಷಕಿ ರೇಣುಕಾ ವಿ. ಸ್ವಾಗತಿಸಿ, ಕ್ರೀಡಾ ಸಂಚಾಲಕ ಮುರಳಿ ಶ್ಯಾಮ್ ವಂದಿಸಿದರು. ಜೀವನ್ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾಕೂಟದ ಅಂಗವಾಗಿ ಮಕ್ಕಳಿಗೆ ಓಟದ ಸ್ಪರ್ಧೆ, ಕ್ರಿಕೆಟ್ ಬಾಲ್ ಎಸೆತ, ಎತ್ತರ ಜಿಗಿತ, ಉದ್ದ ಜಿಗಿತ, ಶಾಟ್ ಪುಟ್, ಕಪ್ಪೆ ಜಿಗಿತ, ಅಡಕೆ ಹೆಕ್ಕುವಿಕೆ, ರಿಲೆ ಮುಂತಾದ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಕ್ರೀಡಾಕೂಟಕ್ಕೆ ಅಧ್ಯಾಪಕರಾದ ರವಿಶಂಕರ್, ಸಿತಾರ, ಶಹೀನಾ, ಹರೀಶ್, ಸಂತೋಷ್, ರೇಖಾ, ಸ್ವಾತಿ, ರಮೇಶ್, ದೀಕ್ಷಿತ ಮೊದಲಾದವರು ನೇತೃತ್ವ ನೀಡಿದರು.




.jpg)
.jpg)
.jpg)
