ಕಾಸರಗೋಡು: ಕೇರಳದಲ್ಲಿ ಪೆÇಲೀಸರ ಧೋರಣೆ ಜನಸಾಮಾನ್ಯರ ಪಾಲಿಗೆ ಯಮಪಾಶವಾಗುತ್ತಿರುವುದಾಗಿ ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿ ಕೆ. ರಂಜಿತ್ ತಿಳಿಸಿದ್ದಾರೆ. ಅವರು ಪಿಣರಾಯಿ ವಿಜಯನ್ ಆಡಳಿತಾವಧಿಯಲ್ಲಿ ಪೆÇಲೀಸರ ದೌರ್ಜನ್ಯ ಖಂಡಿಸಿ ಹಾಗೂ ಪೆÇಲೀಸ್ ಪಡೆಯ ಸಮಗ್ರ ಪರಿವರ್ತನೆಗಾಗಿ ಬಿಜೆಪಿ ಜಿಲ್ಲಾ ಸಮಿತಿ ವತಿಯಿಂದ ಸೋಮವಾರ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಆಯೋಜಿಸಲಾಗಿದ್ದ ಧರಣಿ ಉದ್ಘಾಟಿಸಿ ಮಾತನಾಡಿದರು.
ಕೇರಳದಲ್ಲಿ ಅಮಾಯಕರು ಪೊಲೀಸರಿಂದ ದೌರ್ಜನ್ಯಕ್ಕೊಳಗಾಗುವ ಸನ್ನಿವೇಶ ಹೆಚ್ಚಾಗುತ್ತಿದೆ. ಒಬ್ಬ ವ್ಯಕ್ತಿ ನಿರಪರಾಧಿ ಅಥವಾ ಅಪರಾಧಿ ಎಂಬ ಬಗ್ಗೆ ನಿರ್ಧಾರ ಪೊಲೀಸರ ಮೇಲೆ ಅವಲಂಬಿತವಾಗುತ್ತಿದೆ. ಪೆÇಲೀಸರ ದೌರ್ಜನ್ಯದಿಂದ ಅನೇಕ ಮಂದಿ ಪೊಲೀಸ್ ಠಾಣೆಯಲ್ಲಿ ಸಾವನ್ನಪ್ಪುತ್ತಿದ್ದು, ನಂತರ ಇದನ್ನು ನೇಣು ಬಿಗಿದುಕೊಂಡು ಆತ್ಮಹತ್ಯೆಯಾಗಿ ಪರಿವರ್ತಿಸಲಾಗುತ್ತಿದೆ. ಕೇರಳದ ಎಲ್ಲಾ ಪೆÇಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕಡ್ಡಾಯಗೊಳಿಸಲಾಗಿದ್ದರೂ, ಬಹುತೇಕ ಠಾಣೆಗಳಲ್ಲಿ ಸಿಸಿಟಿವಿ ಆಫ್ ಆಗಿದೆ. ಕೇರಳದ ಜನಮೈತ್ರಿ ಪೆÇಲೀಸ್ ಜನದ್ರೋಹಕರ ಪೆÇಲೀಸ್ ಠಾಣೆಯಾಗಿ ಮಾರ್ಪಟ್ಟಿದೆ. ರಾಜಕೀಯ ವಿರೋಧಿಗಳನ್ನು ನಿಗ್ರಹಿಸಲು ಬಳಸುವ ರಾಜ್ಯದ ಒಂದು ಪಡೆಯಾಗಿ ಪೊಲೀಸರನ್ನು ಸರಕಾರ ಬಳಸುತ್ತಿರುವುದಾಗಿ ಆರೋಪಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಅಧ್ಯಕ್ಷತೆ ವಹಿಸಿದ್ದರು. ಉದಯಗಿರಿಯಿಂದ್ವೆಸ್.ಪಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಜಿಲ್ಲಾ ಉಪಾಧ್ಯಕ್ಷರಾದ ಪಿ.ರಮೇಶ್, ಮಣಿಕಂಠರಾಯ್, ಎಂ.ಬಾಲರಾಜ್, ಎಂ.ಜನನಿ, ಮುರಳೀಧರ್ ಯಾದವ್, ಎಂ.ಭಾಸ್ಕರನ್, ಕಾರ್ಯದರ್ಶಿಗಳಾದ ಎನ್.ಮಧು, ಮಹೇಶ್ ಗೋಪಾಲ್. ಪುಷ್ಪಗೋಪಾಲನ್, ಲೋಕೇಶ್ ನೋಂಡ, ಕೆ.ಎಂ. ಅಶ್ವಿನಿ, ಕೆ.ಟಿ. ಪುರುಷೋತ್ತಮನ್, ಕೋಶಾಧಿಕಾರಿ ವೀಣಾ ಅರುಣ್ ಶೆಟ್ಟಿ, ಸೆಲ್ ಸಂಯೋಜಕ ಸುಕುಮಾರ್ ಕುದುರೆಪಾಡಿ, ಎಸ್‍ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ.ಕೆ. ಕಯ್ಯಾರ್, ಎಸ್.ಟಿ. ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಟಿ.ಡಿ.ಭರತನ್, ಶಿಬು ಪಾಣತ್ತೂರ್, ಮಹಿಳಾ ಮೋರ್ಚಾ ಜಿಲ್ಲಾ ಸಮಿತಿ ಅಧ್ಯಕ್ಷೆ ಕೆ.ಎಸ್. ರಮಣಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸುಕುಮಾರನ್ ಕಾಲಿಕಡವು, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ವಲ್ಸರಾಜ್, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಎನ್.ನಾರಾಯಣ ನಾಯ್ಕ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಅಶ್ವಿನ್ ಮೆರವಣಿಗೆಗೆ ನೇತೃತ್ವ ನೀಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್. ಸುನೀಲ್ ಸ್ವಾಗತಿಸಿದರು. ಮನುಲಾಲ್ ಮೇಲತ್ ವಂದಿಸಿದರು.





