ಕೊಚ್ಚಿ: ನಗರದಲ್ಲಿ ಡನ್ಸೆಫ್ ತಂಡವು ಎಂಡಿಎಂಎ ಮಾದಕ ವಸ್ತು ಸೇವನೆಯಿಂದ ಬಳಲುತ್ತಿದ್ದ ಯುವ ವೈದ್ಯನನ್ನು ಬಂಧಿಸಿದೆ. ಉತ್ತರ ಪರವೂರು ಮೂಲದ ಅಮ್ಜದ್ ಅಹ್ಸನ್ ಎಂಬಾತನನ್ನು ಪೋಲೀಸರು ಬಂಧಿಸಿದ್ದಾರೆ. ಈತನಿಂದ ಒಂದು ಗ್ರಾಂ ಗಿಂತ ಕಡಿಮೆ ಎಂಡಿಎಂಎ ವಶಪಡಿಸಲಾಗಿದೆ.
ಉಕ್ರೇನ್‍ನಲ್ಲಿ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ ಅಮ್ಜದ್ ಪ್ರಸ್ತುತ ಎರ್ನಾಕುಳಂ ಜನರಲ್ ಆಸ್ಪತ್ರೆಯ ಕಾಲ್ ಸೆಂಟರ್‍ನಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಪೋಲೀಸರು ತಿಳಿಸಿದ್ದಾರೆ. ಇದಕ್ಕೂ ಮೊದಲು ಆತ ನಗರದ ಖಾಸಗಿ ಆಸ್ಪತ್ರೆಯಲ್ಲಿಯೂ ಸೇವೆ ಸಲ್ಲಿಸಿದ್ದ. ಪಳರಿವತ್ತಂ ಪೋಲೀಸರಲ್ಲಿ ಇದೇ ರೀತಿಯ ಪ್ರಕರಣವನ್ನು ಈ ಹಿಂದೆ ದಾಖಲಿಸಲಾಗಿತ್ತು ಎಂದು ಪೋಲೀಸರು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ತಪಾಸಣೆಗಳನ್ನು ತೀವ್ರಗೊಳಿಸಲಾಗುವುದು ಎಂದು ತಿಳಿಸಲಾಗಿದೆ.
ಘಟನೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಾದಕ ವಸ್ತುಗಳ ಮೂಲದ ಬಗ್ಗೆ ವಿವರವಾದ ತನಿಖೆ ಆರಂಭಿಸಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.




