ನಾಗರಕೋಯಿಲ್: ಕನ್ಯಾಕುಮಾರಿಯ ಗಾಜಿನ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡ ನಂತರ ಪ್ರವಾಸಿಗರು ಆತಂಕದಲ್ಲಿದ್ದಾರೆ.
ವಿವೇಕಾನಂದ ಬಂಡೆ ಮತ್ತು ತಿರುವಳ್ಳುವರ್ ಪ್ರತಿಮೆಯನ್ನು ಸಂಪರ್ಕಿಸಲು ನಿರ್ಮಿಸಲಾದ ಗಾಜಿನ ಸೇತುವೆಯಲ್ಲಿ ಬಿರುಕು ಕಂಡುಬಂದಿದೆ, ಇದನ್ನು ತಮಿಳುನಾಡು ಸರ್ಕಾರ ಸುಮಾರು 37 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿತ್ತು.
ಬಿರುಕಿನ ನಂತರ, ಪೊಂಪುಕರ್ ಶಿಪ್ಪಿಂಗ್ ಕಾಪೆರ್Çರೇಷನ್ ಅಧಿಕಾರಿಗಳು ಅದರ ಮೇಲೆ ಜನರು ನಡೆಯದಂತೆ ತಡೆದರು. ಆದಾಗ್ಯೂ, ಆಗಸ್ಟ್‍ನಲ್ಲಿ ನಡೆಸಲಾದ ನಿರ್ವಹಣಾ ಕಾರ್ಯದ ಸಮಯದಲ್ಲಿ ಸುತ್ತಿಗೆಯಿಂದ ಬಿದ್ದ ಏಟಿನ ಪರಿಣಾಮ ಗಾಜಿನ ಸೇತುವೆಯ ಗಾಜಿನ ಫಲಕಗಳಲ್ಲಿ ಬಿರುಕು ಉಂಟಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಪ್ರವಾಸಿಗರು ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತವೂ ಹೇಳಿದೆ.
ಬಿರುಕು ಪತ್ತೆಯಾದ ನಂತರ, ಚೆನ್ನೈನಲ್ಲಿರುವ ಸಂಬಂಧಿತ ಕಂಪನಿಗೆ ಗಾಜು ಬದಲಾಯಿಸಲು ತಿಳಿಸಲಾಯಿತು. ಅದನ್ನು ಬದಲಾಯಿಸಲು ಆರಂಭಿಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉದ್ಘಾಟನೆಯ ನಂತರ 17 ಲಕ್ಷ ಜನರು ಗಾಜಿನ ಸೇತುವೆಗೆ ಭೇಟಿ ನೀಡಿದ್ದಾರೆ.




