ಕಾಸರಗೋಡು: ವಿಶ್ವ ಸಾಕ್ಷರತಾ ದಿನದ ಅಂಗವಾಗಿ, ಸೆಪ್ಟೆಂಬರ್ 8 ರಿಂದ 15 ರವರೆಗೆ ಒಂದು ವಾರದ ಸಾಕ್ಷರತಾ ಸಪ್ತಾಹಕ್ಕೆ ಸಂಬಂಧಿಸಿದಂತೆ ಕಾಸರಗೋಡು ಜಿಲ್ಲೆಯಲ್ಲಿ ವ್ಯಾಪಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಮುಂದಿನ ನಾಲ್ಕು ತಿಂಗಳೊಳಗೆ ಜಿಲ್ಲೆಯಲ್ಲಿ 3000 ಜನರು ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡುವ ಚಟುವಟಿಕೆಗಳೊಂದಿಗೆ ಮುಂದುವರಿಯುವುದಾಗಿ ಜಿಲ್ಲಾ ಸಾಕ್ಷರತಾ ಮಿಷನ್ ಸಂಯೋಜಕ ಪಿ.ಎನ್.ಬಾಬು ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ಹಾಲಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಸೇರಿದಂತೆ 1991 ರ ಕಾಲಾವಧಿಯ ಹಿರಿಯ ಸಾಕ್ಷರತಾ ಕಾರ್ಯಕರ್ತರು ಮತ್ತು ಹಿರಿಯ ಕಲಿಕಾದಾರರನ್ನು ಸನ್ಮಾನಿಸಲಾಗುವುದು. ಹೈಯರ್ ಸೆಕೆಂಡರಿ ಸಮಾಂತರ ತರಗತಿಗಳು, ಮಲಯಾಳಂ ತರಗತಿ ಆಯೋಜಿಸಲಾಗುವುದು. ಸಾಕ್ಷರತಾ ಸಪ್ತಾಹವ ಅಂಗವಾಗಿ ಬ್ರೈಲ್ ಕಲಿಕಾದಾರರ ಸಮಾವೇಶ ಮತ್ತು ಇತರ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಯಲಿರುವುದು.




