ಉಪ್ಪಳ: ಬಾಯಾರು ಪ್ರಶಾಂತಿ ವಿದ್ಯಾ ಕೇಂದ್ರದಲ್ಲಿ ಓಣಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಈ ಸಂದರ್ಭ ವಿದ್ಯಾರ್ಥಿಗಳು ಓಣಂ ಆಚರಣೆಯ ಮಹತ್ವ ಕಲ್ಪಿಸುವ ಓಣಂಹೂವಿನ ರಂಗೋಲಿ ರಚಿಸಿದರು. ಅಲಂಕಾರದ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ತಿಂಗಳ ಮಾಸಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಪೆಲತ್ತಡ್ಕ ರಾಮಕೃಷ್ಣ ಭಟ್, ವ್ಯವಸ್ಥಾಪಕ ಎಚ್ ಮಹಾಲಿಂಗ ಭಟ್, ಟ್ರಸ್ಟ್ ಸದಸ್ಯ ಪಯ್ಯರಕೋಡಿ ಸದಾಶಿವ ಭಟ್, ಶಾಲಾ ಪ್ರಾಂಶುಪಾಲ ವಾಮನನ್, ಮಾರ್ಗದರ್ಶಕ ಕೃಷ್ಣ ನಾಯಕ್ ಉಪಸ್ಥಿತರಿದ್ದರು. ಓಣಂ ಹಬ್ಬದ ಅಂಗವಾಗಿ ವಿವಿಧ ಸಪರ್ಧೆ ಆಐಓಜಿಸಲಾಗಿತ್ತು. ವಿದ್ಯಾರ್ಥಿಗಳ ಸಾಂಪ್ರದಾಯಿಕ ನೃತ್ಯ, ತಿರುವಾದಿರ, ವಾಂಜಿಪಾಟ್, ಸಂಗೀತ ಹಾಗೂ ಮಹಾಬಲಿ ವಾಮನ ಅವತಾರದ ದೃಶ್ಯ ಪ್ರದರ್ಶನ ನಡೆಯಿತು.
ಕನ್ನಡ ಶಿಕ್ಷಕ ನಿತ್ಯಾನಂದ ಕೆ ಆರ್ ಬೇಕೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಶಾಲಾ ಶಿಕ್ಷಕ, ಬೋಧಕೇತರ ಸಿಬ್ಬಂದಿ, ಸಾಯಿಬಂಧುಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಸಂದರ್ಭ ಸಾಂಪ್ರದಾಯಿಕ ಓಣಂ ಔತಣ ವಿತರಿಸಲಾಯಿತು.





