ಕಾಸರಗೋಡು: ಸೇವಾ ಪಾಕ್ಷಿಕ ಅಂಗವಾಗಿ ಮಹಿಳಾ ಮೋರ್ಚಾ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ಚಿತ್ರಕಲಾ ಸ್ಪರ್ಧೆ ಕಾಸರಗೋಡು ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ ಜರುಗಿತು. ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷೆ ಅಶ್ವಿನಿ ಎಂ.ಎಲ್ ಸ್ಪರ್ಧೆ ಉದ್ಘಾಟಿಸಿದರು. ಅಭಿವೃದ್ಧಿ ಹೊಂದಿದ ಭಾರತ, ಡಿಜಿಟಲ್ ಭಾರತ ಮತ್ತು ಸ್ವಾವಲಂಬಿ ಭಾರತ ಎಂಬ ವಿಷಯಗಳನ್ನು ಆಧರಿಸಿ ಹತ್ತು ವರ್ಷಕ್ಕಿಂತ ಮೇಲ್ಪಟ್ಟವರಿಗಾಗಿ ಚಿತ್ರ ರಚನಾ ಸ್ಪರ್ಧೆ ಆಯೋಜಿಸಲಾಗಿತ್ತು.
ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ರಮಣಿ ಕೆ.ಎಸ್. ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯೆ ಸವಿತಾ ಟೀಚರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನೀಲ್, ಜಿಲ್ಲಾ ಉಪಾಧ್ಯಕ್ಷ ಪಿ. ರಮೇಶ್, ಜಿಲ್ಲಾ ಕಾರ್ಯದರ್ಶಿಗಳಾದ ಪುಷ್ಪಾಗೋಪಾಲನ್, ಪ್ರಮೀಳಾ ಮಜಲ್, ಮಂಡಲ ಕಾರ್ಯದರ್ಶಿ ಪ್ರಿಯಾ ನಾಯಕ್, ಬಿಜೆಪಿ ಮಧೂರ್ ಪಶ್ಚಿಮ ಪ್ರದೇಶ ಅಧ್ಯಕ್ಷ ಮಾಧವ ಮಾಸ್ಟರ್, ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ ಕೆ, ನುಳ್ಳಿಪಾಡಿ ವಾರ್ಡ್‍ನ ಜನಪ್ರತಿನಿಧಿ ಯಶೋದಾ ಬಿ, ಮಹಿಳಾ ಮೋರ್ಚಾ ಪದಾಧಿಕಾರಿಗಳಾದ ಲೀಲಾವತಿ ಟೀಚರ್, ಅನಿತಾ ನಾಯಕ್, ಎಸ್.ಅನುಶ್ರೀ, ಧನ್ಯ ಸುಮೋದ್, ಮಮತಾ ಸಾಗರ್, ಪ್ರೇಮಲತಾ ಉಪಸ್ಥಿತರಿದ್ದರು.





