ಬದಿಯಡ್ಕ: ನೀರ್ಚಾಲು ಸಮೀಪದ ಕೊಲ್ಲಂಗಾನ ಶ್ರೀನಿಲಯ ಶ್ರೀದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಇಂದಿನಿಂದ ಅ.2ರ ವರೆಗೆ ಶರನ್ನವರಾತ್ರಿ ಉತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಪ್ರತಿನಿತ್ಯ ವಿವಿಧ ವೈದಿಕ ವಿಧಿವಿಧಾನಗಳು, ಅನ್ನ ಸಂತರ್ಪಣೆ ನಡೆಯಲಿದೆ.
ಈ ಸಂದರ್ಭ ಶ್ರೀಸುಬ್ರಹ್ಮಣ್ಯ ಯಕ್ಷಗಾನ ಕಲಾಸಂಘ ಕೊಲ್ಲಂಗಾನದ 37ನೇ ವಾರ್ಷಿಕೋತ್ಸವದ ಅಂಗವಾಗಿ ಯಕ್ಷ ಏಕಾದಶ ವೈಭವ ತಾಳಮದ್ದಳೆ ಪ್ರತಿನಿತ್ಯ ಸಂಜೆ 6.30 ರಿಂದ ಆಯೋಜಿಸಲಾಗಿದೆ. ಇಂದು ಸಂಜೆ 5.30ಕ್ಕೆ ಉದ್ಘಾಟನೆ ನಡೆಯಲಿದೆ. ಬಳಿಕ ಶಾಂಭವಿ ವಿಲಾಸ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಮಂಗಳವಾರ ಶಲ್ಯ ಸಾರಥ್ಯ, ಬುಧವಾರ ಸುಗ್ರೀವ ಸಾರಥ್ಯ, ಗುರುವಾರ ನಿಲಯದ ಕಲಾವಿದರಿಂದ ಯಕ್ಷಗಾನೀಯ ಕಾರ್ಯಕ್ರಮ, ಶುಕ್/ರವಾರ ಯಕ್ಷಗಾನ ವೈಭವ, ಶನಿವಾರ ಬಡಗು ಯಕ್ಷ-ನೃತ್ಯ-ವೈಭವ, ಭಾನುವಾರ ಯಕ್ಷಗಾನ ತಾಳಮದ್ದಳೆ, ಸೋಮವಾರ ಯಕ್ಷಗಾನೀಯ ಕಾರ್ಯಕ್ರಮ, ಮಂಗಳವಾರ ಯಕ್ಷ ಗಾನಾರ್ಚನೆ, ಅ.1 ರಂದು ಬೆಳಿಗ್ಗೆ 10.30ರಿಂದ ಪುರಾಣ ವಾಚನ ಕಾರ್ಯಕ್ರಮ, ಸಂಜೆ 6 ರಿಂದ ಕುಣಿತ ಭಜನೆ, ಅ.2 ರಂದು ಭಜನೆ, ರಾತ್ರಿ 8 ರಿಂದ ಸಮಾರೋಪ, ಕಾರ್ಯಕ್ರಮ ಬಳಿಕ ಅತಿಥಿ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ನಡೆಯಲುಇದೆ.





