ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವರ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಚಾರಾರ್ಥವಾಗಿ ಬಳಸಿಕೊಳ್ಳಲು ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ಪ್ರಚಾರ ಸಮಿತಿಯ ನೇತೃತ್ವದಲ್ಲಿ ಲಾಂಛನ(ಲೋಗೋ) ಆಹ್ವಾನಿಸಲಾಗಿದೆ. ಆಯ್ಕಯಾಗುವುದಕ್ಕೆ ಪ್ರಥಮ ಹಾಗೂ ಐದು ಮೆಚ್ಚುಗೆ ಬಹುಮಾನಗಳನ್ನು ನೀಡಲಾಗುವುದು. ಲಾಂಛನವನ್ನು 9633876833 ಈ ನಂಬರ್‍ಗೆ ವಾಟ್ಸಾಪ್ ಅಥವಾ ನೇರವಾಗಿ ಪೆರಡಾಲ ಕ್ಷೇತ್ರದ ಕಚೇರಿಗೆ ತಲುಪಿಸಬಹುದು. ರಚಿಸಿದವರ ಹೆಸರು, ದೂರವಾಣಿ ಸಂಖ್ಯೆಯನನ್ನು ಪ್ರತ್ಯೇಕ ಹಾಳೆಯಲ್ಲಿ ನಮೂದಿಸಬೇಕು. ಸೆ. 25 ರ ಮೊದಲು ತಲುಪುವಂತೆ ಕಳಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.




