ಕೋಲ್ಕತ್ತ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಲ್ಲಿನ ಸಂತೋಷ ಮಿತ್ರ ಸ್ಕ್ವೇರ್‌ನಲ್ಲಿ ದುರ್ಗಾ ಪೂಜಾ ಪೆಂಡಾಲ್ ಅನ್ನು ಶುಕ್ರವಾರ ಉದ್ಘಾಟಿಸಿದರು.
ನಂತರ, '2026ರ ವಿಧಾನಸಭೆ ಚುನಾವಣೆ ಬಳಿಕ ನೂತನ ಸರ್ಕಾರದ ಅಸ್ತಿತ್ವದೊಂದಿಗೆ ಪಶ್ಚಿಮ ಬಂಗಾಳದ 'ಸುವರ್ಣ ದಿನಗಳು' ಮರುಕಳಿಸಲಿ' ಎಂದು ದೇವಿಯಲ್ಲಿ ಪ್ರಾರ್ಥಿಸಿದರು.
ಬಂಗಾಳವು ಸುರಕ್ಷಿತ, ಶಾಂತಿಯುತ ಮತ್ತು ಸಮೃದ್ಧಿಯಿಂದ ಕೂಡಿರಬೇಕು. ನೊಬೆಲ್ ಪುರಸ್ಕೃತ ರವೀಂದ್ರನಾಥ ಠ್ಯಾಗೋರ್ ಅವರ ಕನಸು ನನಸಾಗಬೇಕು ಎಂದು ಹೇಳಿದರು.
ಇತ್ತೀಚೆಗೆ ರಾಜ್ಯದಲ್ಲಿ ನಡೆದ ಮಳೆ ಸಂಬಂಧಿತ ಅವಘಡಗಳ ಬಗ್ಗೆ ನೆನೆದು ಕಂಬನಿ ಮಿಡಿದರು. 'ಹಬ್ಬದ ಆರಂಭದಲ್ಲಿ ಹಲವು ದುಃಖದ ಗಳಿಗೆಗೆ ಸಾಕ್ಷಿಯಾಗಿದ್ದೇವೆ. 10ಕ್ಕೂ ಹೆಚ್ಚು ಜನರು ಮಳೆ ಸಂಬಂಧಿತ ಅವಘಡಗಳಲ್ಲಿ ಮೃತಪಟ್ಟಿದ್ದಾರೆ. ಮೃತರೆಲ್ಲರಿಗೂ ನಮನ ಸಲ್ಲಿಸುವೆ' ಎಂದರು.




