ಮುಳ್ಳೇರಿಯ: ವಿದ್ಯಾಶ್ರೀ ಶಿಕ್ಷಣ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ನಿರ್ಮಿಸಿದ ನೂತನ ಕೊಠಡಿಯ ಉದ್ಘಾಟನೆಯನ್ನು ಉಮೇಶ್ ಕಾಮತ್ ಕಾಂಞಂಗಾಡ್ ನೆರವೇರಿಸಿದರು.
ಆ ಪ್ರಯುಕ್ತ ನಡೆದ ಸಭೆಯ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಗಣೇಶವತ್ಸ ನೇಕ್ರಾಜೆ ವಹಿಸಿದ್ದರು. ಸೆಲ್ಫ್ ಗ್ರೋಥ್ ನಿಧಿ ಲಿಮಿಟೆಡ್‍ನ ಅಧ್ಯಕ್ಷ ಕೆ. ರಾಜೇಶ್ ಕಾಮತ್, ನಿರ್ದೇಶಕ ಕೆ. ವೇಣುಗೋಪಾಲನ್ ನಾಯರ್, ರೋಟರಿ ಕ್ಲಬ್ ಕಾಂಞಂಗಾಡಿನ ಅಧ್ಯಕ್ಷ ಜಯೇಶ್ ಕಾಂಞಂಗಾಡ್, ಕ್ಯಾಂಪ್ಕೊ ನಿರ್ದೇಶಕ ಸತ್ಯನಾರಾಯಣ ಪ್ರಸಾದ್ ಮತ್ತಿತರ ಗಣ್ಯವ್ಯಕ್ತಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ರೋಟರಿ ಕ್ಲಬ್‍ನ ಸದಸ್ಯರು ಶಾಲಾ ವಿದ್ಯಾರ್ಥಿಗಳಿಗಾಗಿ ಐದು ಲ್ಯಾಪ್ಟಾಪ್‍ಗಳನ್ನು ವಿತರಿಸಿ, ಮಕ್ಕಳನ್ನುದ್ದೇಶಿಸಿ ಮಾತನಾಡಿ ಶುಭಹಾರೈಸಿದರು.
ಅಧ್ಯಾಪಿಕೆ ರಂಜಿನಿ ಸ್ವಾಗತಿಸಿ, ಉಷಾ ವಂದಿಸಿದರು. ಹತ್ತನೇ ತರಗತಿ ವಿದ್ಯಾರ್ಥಿ ಸಮರ್ಥ್ ಗಣೇಶ್ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲಾ ಆಡಳಿತ ಸಮಿತಿ ಸದಸ್ಯರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.






