ಕಾಸರಗೋಡು: ಕೇರಳ ರಾಜ್ಯೋತ್ಸವ ದಿನವಾದ ನ. 1ರಂದು ಕನ್ನಡಿಗರು ಕರಿ ದಿನಾಚರಣೆ ಅಥವಾ ಕನಡಿಗರ ಹಕ್ಕೊತ್ತಾಯ ದಿನವನ್ನಾಗಿ ಆಚರಿಸುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸಲು ಅ. 12ರಂದು ಬೆಳಗ್ಗೆ 10ಕ್ಕೆ ಕಾಸರಗೋಡು ಬೀರಂತಬೈಲಿನ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕಚೇರಿಯಲ್ಲಿ ನಡೆಯಲಿರುವುದು.
ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಂಸ್ಕøತಿಯ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದು, ಈ ಕಾಲಘಟ್ಟದಲ್ಲಿ ಭಾಷೆ, ಸಂಸ್ಕøತಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಒಗ್ಗಟ್ಟಿನ ಹೋರಾಟ ಅನಿವಾರ್ಯವಾಗಿದೆ. 1956ರ ಭಾಷಾವಾರು ಪ್ರಾಂತ ವಿಭಜನೆ ಸಂದರ್ಭ ಕಾಸರಗೋಡನ್ನು ಅನ್ಯಾಯವಾಗಿ ಕೇರಳಕ್ಕೆ ಸೇರ್ಪಡೆಗೊಳಿಸಿದ ಅಂದಿನಿಂದ ಇಲ್ಲಿನ ಭಾಷ ಅಲ್ಪಸಂಖ್ಯಾತರು ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಈ ನಿಟ್ಟಿನಲ್ಲಿ ಸಮಾಲೋಚಿಸಿ ಮುಂದುವರಿಯಲು ಸಹಾಯವಾಗುವ ರೀತಿಯಲ್ಲಿ ಸಭೆ ಆಯೋಜಿಸಿರುವುದಾಗಿ ಪ್ರಕಟಣೆ ತಿಳಿಸಿದೆ.




