ಬದಿಯಡ್ಕ: ಕಾರ್ಮಾರು ಶ್ರೀ ಮಹಾವಿಷ್ಣು ಸೇವಾ ಸಮಿತಿಯ ಮಹಾಸಭೆ ಪುದುಕೋಳಿ ಶ್ರೀಕೃಷ್ಣ ಭಟ್ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಕ್ಷೇತ್ರದ ಮಾಜಿ ಆಡಳಿತ ಮೊಕ್ತೇಸರ ಗೋಪಾಲ ಭಟ್ ಪಿ ಎಸ್ ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ರಾಮ ಕಾರ್ಮಾರು ಸಮಿತಿಯ ಗತ ವರದಿ ಮುಂದಿಟ್ಟರು. ಕೋಶಾಧಿಕಾರಿ ಸುಂದರ ಶೆಟ್ಟಿ ಕೊಲ್ಲಂಗಾನ ಲೆಕ್ಕಪತ್ರ ಮಂಡಿಸಿದರು. ಟ್ರಸ್ಟಿ ಉದಯ ಪಣಿಕ್ಕರ್, ನರಸಿಂಹ ಭಟ್ ಕಾರ್ಮಾರು, ರಂಜಿತ್ ಯಾದವ್ ಮೊದಲಾದವರು ಉಪಸ್ಥಿತರಿದ್ದರು.
ಮುಂದಿನ ಅವಧಿಗೆ ನೂತನ ಸಮಿತಿಯನ್ನು ರೂಪೀಕರಿಸಲಾಯಿತು. ಅಧ್ಯಕ್ಷರಾಗಿ ನರಸಿಂಹ ಭಟ್ ಕಾರ್ಮಾರು, ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ್ ವಳಕುಂಜ, ಕೋಶಾಧಿಕಾರಿಯಾಗಿ ರಾಮ ಕೆ ಕಾರ್ಮಾರು ಇವರನ್ನು ಆಯ್ಕೆ ಮಾಡಲಾಯಿತು. ಯುವಕ ವೃಂದದ ಅಧ್ಯಕ್ಷ ವಿಜಯಕುಮಾರ್ ಮಾನ್ಯ ಸ್ವಾಗತಿಸಿ, ಕಾರ್ಯದರ್ಶಿ ಗೋಕುಲ್ ಶರ್ಮ ಕಾರ್ಮಾರು ವಂದಿಸಿದರು.





