ಮಧೂರು: ಅಂತರಾಷ್ಟ್ರೀಯ ವಯೋಜನ ದಿನಾಚರಣೆಯನ್ನು ಕೇರಳ ಸ್ಟೇಟ್ ಪೆನ್ಷನರ್ಸ್ ಸಂಘದ ಮಧೂರು ಘಟಕದ ಆಶ್ರಯದಲ್ಲಿ ಪಾರಕಟ್ಟೆಯಲ್ಲಿ ಆಚರಿಸಲಾಯಿತು. ಸಂಘದ ಹಿರಿಯ ಸದಸ್ಯ ಹಾಗೂ ಧಾರ್ಮಿಕ ಮುಂದಾಳು, ನಿವೃತ್ತ ತಹಸೀಲ್ದಾರ್ ರಘುವೀರ್ ಶೆಟ್ಟಿ ಅವರನ್ನು ಈ ಸಂದರ್ಭ ಗೌರವಿಸಲಾಯಿತು.
ಗೌರವಾಧ್ಯಕ್ಷ ವಿಷ್ಣು ಭಟ್ ಕಕ್ಕೆಪಾಡಿ ರಘುವೀರ್ ಶೆಟ್ಟಿ ಇವರ ಕಿರುಪರಿಚಯವನ್ನು ನೀಡಿದರು. ಅಧ್ಯಕ್ಷ ಶಿವ ನಾಯ್ಕ್ ಶಾಲು ಹೊದಿಸಿ ರಘುವೀರ್ ಶೆಟ್ಟಿ ದಂಪತಿಯವರನ್ನು ಸನ್ಮಾನಿಸಿದರು. ನೂತನ ಕುಮಾರಿ ಮತ್ತು ಶ್ರೀ ಬಲರಾಮ್ ಭಟ್ ಇವರು ಫಲ ಪುಷ್ಪ ನೀಡಿದರು. ಬಾಲಕೃಷ್ಣ ಉಳಿಯ, ನಾರಾಯಣ ಎಂ, ಶ್ರೀಕೃಷ್ಣ ನಡುವಂತಿಲ್ಲಾಯ, ಕೇಶವ ಭಟ್ ಮನ್ನಿಪಾಡಿ ಅಭಿನಂದಿಸಿ ಮಾತನಾಡಿದರು. ಮಧೂರು ಘಟಕದ ಕಾರ್ಯದರ್ಶಿ ನೂತನ ಕುಮಾರಿ ಸ್ವಾಗತಿಸಿ,ನಿರೂಪಿಸಿದರು. ಲೀಲಾವತಿ ಟೀಚರ್ ವಂದಿಸಿದರು.





