HEALTH TIPS

'ವಂದೇ ಮಾತರಂ'150ನೇ ಸಂಭ್ರಮದಲ್ಲಿ ಪಾಲ್ಗೊಳ್ಳಿ; ಜನತೆಗೆ ಮೋದಿ ಕರೆ

 ನವದೆಹಲಿ: 'ವಂದೇ ಮಾತರಂ' ರಾಷ್ಟ್ರೀಯ ಗೀತೆ 150 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ. ಈ ಮೂಲಕ ಭವಿಷ್ಯದ ಪೀಳಿಗೆಗೆ ಅದರ ಮೌಲ್ಯವನ್ನು ಅರ್ಥೈಸಲು ಅನುವು ಮಾಡಿಕೊಡಿ ಎಂದು ಪ್ರಧಾನಿ ನರೇಂದ್ರ ಮೋದಿ ಜನರನ್ನು ಒತ್ತಾಯಿಸಿದ್ದಾರೆ.

ಮಾಸಿಕ 'ಮನ್‌ ಕಿ ಬಾತ್‌' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಂದೇ ಮಾತರಂ ಗೀತೆಯ 150ನೇ ವರ್ಷವನ್ನು ಸ್ಮರಣೀಯವಾಗಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. 


ಬಂಗಾಳಿ ಕಾದಂಬರಿಕಾರ, ಕವಿ ಬಂಕಿಮಚಂದ್ರ ಚಟರ್ಜಿ ಅವರು ರಚಿಸಿರುವ 'ವಂದೇ ಮಾತರಂ' ರಾಷ್ಟ್ರೀಯ ಗೀತೆಯು 150 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಆಚರಣೆಗಳನ್ನು ನಡೆಸಲಾಗುವುದು ಎಂದರು.

ಹಿಮಾಚಲ ಪ್ರದೇಶ: ಪಕ್ಷ ವಿರೋಧಿ ಚಟುವಟಿಕೆ, ಕಾಂಗ್ರೆಸ್‌ನ 30 ನಾಯಕರ ಉಚ್ಛಾಟನೆಕರುನಾಡ ಸವಿಯೂಟ: ಕನಕಪುರ ಶೈಲಿ ಹೊಳೆ ಮೀನು ಸಾರು

ತಮ್ಮ 30 ನಿಮಿಷಗಳ ಭಾಷಣದಲ್ಲಿ ಮೋದಿ ಅವರು, ದೇಶದ ವಿವಿಧ ಭಾಗಗಳಲ್ಲಿ ಜನರು ಕೈಗೊಂಡ ಹಲವಾರು ವಿಶಿಷ್ಟ ಉಪಕ್ರಮಗಳು ಬಗ್ಗೆ ಮಾತನಾಡಿದ್ದಾರೆ. ಗುಜರಾತ್‌ನಲ್ಲಿ ಮ್ಯಾಂಗ್ರೋವ್‌ಗಳನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳು, ಛತ್ತೀಸಗಢದಲ್ಲಿ ಕಸದ ಕೆಫೆಗಳನ್ನು ಸ್ಥಾಪಿಸುವುದು ಮತ್ತು ಬೆಂಗಳೂರಿನಲ್ಲಿ ಸರೋವರಗಳನ್ನು ಪುನರುಜ್ಜೀವನಗೊಳ್ಳಿಸುವುದು ಸೇರಿದೆ.

ಬಿಎಸ್‌ಎಫ್ ಮತ್ತು ಸಿಆರ್‌ಪಿಎಫ್ ಅರೆಸೈನಿಕ ಪಡೆಗಳು ತಮ್ಮ ಘಟಕಗಳಲ್ಲಿ ಭಾರತೀಯ ಶ್ವಾನ ತಳಿಗಳನ್ನು ಸೇರಿಸಿಕೊಂಡ ಪ್ರಯತ್ನಗಳನ್ನು ಮೋದಿ ಶ್ಲಾಘಿಸಿದ್ದಾರೆ.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries