ಬೀಜಿಂಗ್: ಮೌಂಟ್ ಎವರೆಸ್ಟ್‌ನ ಟಿಬೆಟ್ ಭಾಗದ ಪೂರ್ವ ಇಳಿಜಾರಿನಲ್ಲಿ ಸಿಲುಕಿದ್ದವರಲ್ಲಿ 350 ಮಂದಿಯನ್ನು ರಕ್ಷಿಸಲಾಗಿದ್ದು, ಇನ್ನೂ 200 ಜನರ ಸಂಕಷ್ಟದಲ್ಲಿದ್ದಾರೆ.
ಶುಕ್ರವಾರದಿಂದ ಹಿಮಪಾತವಾಗುತ್ತಿರುವುದರಿಂದ ರಸ್ತೆಗಳು ಮುಚ್ಚಿಹೋಗಿವೆ. ನೂರಾರು ಮಂದಿ ಸ್ಥಳೀಯರು ಮತ್ತು ರಕ್ಷಣಾ ಸಿಬ್ಬಂದಿ ನೆರವು ನೀಡುತ್ತಿದ್ದಾರೆ.
ಮೌಂಟ್ ಎವರೆಸ್ಟ್‌ನಲ್ಲಿ ಸಾವಿರ ಜನ ಸಿಲುಕಿಹಾಕಿಕೊಂಡಿದ್ದಾರೆ ಎಂದು ಭಾನುವಾರ ವರದಿಯಾಗಿತ್ತು.
ಅಲ್ಲಿಂದ ಮರಳಿದ ಜನರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವಿಡಿಯೊಗಳ ಪ್ರಕಾರ, ಹಿಮಗಾಳಿಯು ಭಾನುವಾರ ಬಲವಾಗಿ ಅಪ್ಪಳಿಸಿದೆ. ರಸ್ತೆಗಳು ಹಿಮಾವೃತಗೊಂಡಿವೆ.




