HEALTH TIPS

ದುರ್ಗಿಪಳ್ಳದಲ್ಲಿ ಮೇಳೈಸಿದ ಪುವೆಂಪು ನೆನಪು-2025: ಪ್ರಶಸ್ತಿ ಪ್ರದಾನ

ಮಂಜೇಶ್ವರ: ಸಮಗ್ರ ಕರ್ನಾಟಕಕ್ಕೊಬ್ಬ ಕುವೆಂಪು ಇದ್ದಂತೆ, ಕರಾವಳಿ ಕರ್ನಾಟಕದಲ್ಲಿ ಪುವೆಂಪು ಅವರು ಸಾಹಿತ್ಯ, ಸಂಶೋಧನೆ, ಭಾಷಾಂತರ ಮೊದಲಾದ ವಿವಿಧ ವಲಯಗಳಲ್ಲಿ ನೀಡಿರುವ ಅನಘ್ರ್ಯ ಕೊಡುಗೆಗಳು ಅಪಾರವಾದುದು. ಅವರ ಸಾಹಿತ್ಯ ಮೌಲ್ಯಯುತವಾಗಿ ಚತುರ್ಭಾಷಾ ವಲಯದ ವಿಶಿಷ್ಟ ಧ್ರವನಕ್ಷತ್ರ ಪುಂಡೂರು ವೆಂಕಟರಾಜ ಪುಣಿಚಿತ್ತಾಯರ ಹಿರಿಮೆ ಎಂದು ಕರ್ನಾಟಕ ವಿಧಾನಪರಿಷತ್ತು ಸಭಾಪತಿ ಬಸವರಾಜ ಎಸ್.ಹೊರಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು. 


ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಡಾ.ಪುಂಡೂರು ವೆಂಕಟರಾಜ ಪುಣಿಚಿತ್ತಾಯ(ಪುವೆಂಪು) ಪ್ರತಿಷ್ಠಾನ ಕಾಸರಗೋಡು, ಕೇರಳ ತುಳು ಅಕಾಡೆಮಿ ಮಂಜೇಶ್ವರ ಇವುಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ದುರ್ಗಪಳ್ಳದಲ್ಲಿರುವ ಕೇರಳ ತುಳು ಅಕಾಡೆಮಿ ಸಭಾಭವನದಲ್ಲಿ ನಡೆದ ತುಳುರತ್ನ, ಬಹುಭಾಷಾ ವಿದ್ವಾಂಸ ಡಾ.ಪಿ.ವೆಂಕಟರಾಜ ಪುಣಚಿತ್ತಾಯರ ಪುವೆಂಪು ನೆನಪು-2025 ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾರಂಭದಲ್ಲಿ ದಿವ್ಯ ಉಪಸ್ಥಿತರಿದ್ದ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಚನಗೈದು, ಭಾಷಾಧ್ಯಯನ ಬುದ್ದಿಯ ವಿಕಾಸಕ್ಕೆ, ಭಾಷೆಯೊಳಗಿನ ಸಮೃದ್ಧಿಯ ಸವಿಯುವಿಕೆಗೆ ಕಾರಣವಾಗುತ್ತದೆ. ಆದರೆ ದಿ.ಪುಣಿಚಿತ್ತಾಯರು ಚತುರ್ಭಾಷಾ ವಿದ್ವಾಂಸಕಾಗಿ ನೀಡಿರುವ ಬಹುಮುಖ ಕೊಡುಗೆಗಳು ವಿಶಿಷ್ಟವಾದುದು. ಕಾಸರಗೋಡಿನ ಕನ್ನಡಿಗರು ಅನ್ಯ ಭಾಷೆಗಳ ವಿರೋಧಿಗಳಲ್ಲ. ಆದರೆ, ಇಲ್ಲಿಯ ಕನ್ನಡಿಗರ ಮೇಲೆ ಇತರ ಭಾಷೆಯನ್ನು ಹೇರುವ ಯತ್ನ ಸ್ವೀಕಾರಾರ್ಹವಲ್ಲ.ಎಲ್ಲರೊಡನೆ ಒಂದಾಗಿ ದಿ.ಪುಣಿಚಿತ್ತಾಯರು ಬಾಳಿದಂತೆ ತಮ್ಮದನ್ನೂ, ಅನ್ಯವನ್ನೂ ಸಮಾನವಾಗಿ ಸ್ವೀಕರಿಸುವ ವಿಶಾಲತೆ ಇಲ್ಲಿಯ ಕನ್ನಡಿಗರದ್ದು ಎಂದರು. ಪುಣಿಚಿತ್ತಾಯರದ್ದು ಹೆತ್ತಭಾಷೆ ಕನ್ನಡವಾದರೂ, ಹೊತ್ತಭಾಷೆ ತುಳುವಾಗಿತ್ತು. ಸಾಮರಸ್ಯದ ಬದುಕನ್ನು ತೋರಿಸಿ ಬಾಳಿದವರು ಪುಣಿಚಿತ್ತಾಯರ ಹಿರಿಮೆ ಎಂದವರು ತಿಳಿಸಿದರು. 


ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ  ಸೋಮಣ್ಣ ಬೇವಿನ ಮರದ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಬೆಸೆಂಟ್ ಕಾಲೇಜಿನ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥೆ ಡಾ. ಮೀನಾಕ್ಷಿ ರಾಮಚಂದ್ರ ನುಡಿ ನಮನ ಸಲ್ಲಿಸಿ ಮಾತನಾಡಿದರು. 

ಈ ಸಂದರ್ಭ ಹಿರಿಯ ಸಾಹಿತಿ, ಚಿಂತಕ, ನಿವೃತ್ತ ಪ್ರಾಧ್ಯಾಪಕ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅವರಿಗೆ 'ಪುವೆಂಪು ನೆನಪು-2025' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಾಜಿ ಸಚಿವ, ಕರ್ನಾಟಕ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ   ಹೆಚ್. ಎಂ. ರೇವಣ್ಣ ಪ್ರಶಸ್ತಿ ಪ್ರದಾನಮಾಡಿದರು. 

ಮುಖ್ಯ ಅತಿಥಿಗಳಾಗಿ  ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ,  ಕಸಾಪ ಜಿಲ್ಲಾಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ವಿಜಯರಾಜ ಪುಣಿಚಿತ್ತಾಯ ಉಪಸ್ಥಿತರಿದ್ದು ಮಾತನಾಡಿದರು. 


ರಾಷ್ಟಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಅಧ್ಯಕ್ಷ ಉಮೇಶ್ ಎಂ ಸಾಲಿಯಾನ್, ಗಮಕಕಲಾ ಪರಿಷತ್ತು ಅಧ್ಯಕ್ಷ  ಟಿ. ಶಂಕರ ನಾರಾಯಣ ಭಟ್ಟ, ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷ ಎನ್. ಚನಿಯಪ್ಪ ನಾಯ್ಕ, ಕ.ಜಾ.ಪ. ದ.ಕ.ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲ್‍ಬೈಲ್, ಝಡ್.ಎ.ಕಯ್ಯಾರ್, ಅಖಿಲೇಶ್ ನಗುಮುಗಂ,ಫಾದರ್ ಬೇಸಿಲ್ ವಾಸ್, ಅರಿಬೈಲು ಗೋಪಾಲ ಶೆಟ್ಟಿ,  ಪೃಥ್ವಿರಾಜ್ ಶೆಟ್ಟಿ ಕುಂಬಳೆ ಮುಂತಾದವರು ಉಪಸ್ಥಿತರಿದ್ದರು. 

ಪುವೆಂಪು ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಎ.ಶ್ರೀನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪತ್ರಕರ್ತ ರವಿ ನಾಯ್ಕಾಪು ನಿರೂಪಿಸಿದರು. ಗಂಗಾಧರ ತೆಕ್ಕೆಮೂಲೆ ಸನ್ಮಾನಪತ್ರ ವಾಚಿಸಿದರು. ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ರಾಮಪ್ಪ ಮಂಜೇಶ್ವರ ಸಹಕರಿಸಿದರು. ಜಯಾನಂದಕುಮಾರ್ ಹೊಸದುರ್ಗ, ಹಾಗೂ ಡಾ.ನಾಗೇಶ್ ಕೆ.ಎನ್. ನಾಡಗೀತೆ ಹಾಗೂ ಪ್ರಾರ್ಥನಾಗೀತೆ ಹಾಡಿದರು.

ಬೆಳಿಗ್ಗೆ ಕಾಸರಗೋಡು ಸಾಹಿತ್ಯ ಸಾಂಸ್ಕøತಿಕ ಸಂಘದ ಡಾ.ವಾಣಿಶ್ರೀ ಕಾಸರಗೋಡು ತಂಡದವರಿಂದ ಪುವೆಂಪು ರಚಿಸಿದ ಗೀತೆಗಳ ನೃತ್ಯ ರೂಪಕ, ಭಾವ ಗಾನ ಗಾಯನ, ನೃತ್ಯ ವೈಭವ ನಡೆಯಿತು. ಉದ್ಘಾಟನೆ, ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಪುವೆಂಪು ಚತುರ್ಭಾಷಾ ಕಾವ್ಯ ಸಂವಾದ ನಡೆಯಿತು. ಲಕ್ಷ್ಮಿ. ಕೆ, ರವೀಂದ್ರನ್ ಪಾಡಿ ಡಾ. ಆಶಾಲತಾ ಚೇವಾರು, ವಿಜಯ ಕಾನ ಭಾಗವಹಿಸಿದ್ದರು. ಸಮನ್ವಯಕಾರರಾಗಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಸಹಕರಿಸಿದರು. ವಕೀಲ ಥೋಮಸ್ ಡಿ' ಸೋಜಾ ಸ್ವಾಗತಿಸಿ, ವಂದಿಸಿದರು.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries