ಕಾಸರಗೋಡು: ನಗರದ ಕೋಟೆ-ಪಳ್ಳದ ಕೊಟ್ಯ ಶ್ರೀ ಧೂಮಾವತಿ "ದೀಪಾವಳಿ ನೆಮೋತ್ಸವ . 20ರಂದು ಜರುಗಲಿದೆ. 19ರ ಸಂಜೆ 6ಕ್ಕೆ ನೆಲ್ಲಿಕುಂಜೆ ಪಳ್ಳದ ಕೊಟ್ಯ ತರವಾಡು ದೈವಸ್ಥಾನ ದಿಂದ ಮೆರವಣಿಗೆ ಮೂಲಕ ಶ್ರೀ ದೈವದ ಭಂಡಾರ ಕೋಟೆಬಾಗಿಲಿನಲ್ಲಿನ ಪಳ್ಳದಕೊಟ್ಯ ಚಾವಡಿಗೆ ತಂದು ಕೋಟೆ ನಾಯಕರ ಮನೆಯವರು ರಾಮಕ್ಷತ್ರಿಯ ಸಮಾಜ ಹಾಗೂ ಊರ, ಪರವೂರ ಭಕ್ತಾದಿಗಳ ಕೂಡುವಿಕೆಯಿಂದ ದೈವನೇಮೋತ್ಸವ ನಡೆಯಲಿರುವುದು.ದೈವ ಕೋಲದ "ವೀಳ್ಯ ಕೊಡುವ ಕಾರ್ಯಕ್ರಮ "ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ವಠಾರದಲ್ಲಿ ನಡೆಯಿತು. ಕೋಟೆ ಧೂಮಾವತಿ ಉತ್ಸವ ಸಮಿತಿ ನೇತೃತ್ವದಲ್ಲಿ ಧೂಮಾವತಿ ದೈವಕ್ಕೆ ಅಧ್ಯಕ್ಷ ನವೀನ್ ನಾಯ್ಕ್ ವೀಳ್ಯ ನೀಡಿದರು. ಪ್ರದಾನ ಕಾರ್ಯದರ್ಶಿ ಮೋಹನ್ ದಾಸ್, ಕೋಶಾಧಿಕಾರಿ ವಾಮನ್ ರಾವ್ ಬೇಕಲ್, ಪ್ರದೀಪ್ ನಾಯ್ಕ್, ಶ್ರೀಕಾಂತ್ ನಾಯಕ್, ಹರೀಶ್ ಕೂಡ್ಲು, ಕೌಶಿಕ್ ನಾಯ್ಕ್ ಮೊದಲಾದವರು ಉಪಸ್ಥೀತರಿದ್ದರು.





