ಬದಿಯಡ್ಕ: ಬದಿಯಡ್ಕ ಬೋಳುಕಟ್ಟೆಯಲ್ಲಿ ಕಾರು ಡಿಕ್ಕಿಯಾಗಿ ಕೃಷಿಕ, ಬೋಳುಕಟ್ಟೆ ಅನುಗ್ರಹ ಕಾಂಪ್ಲೆಕ್ಸ್‍ನಲ್ಲಿ ವಾಸಿಸುತ್ತಿರುವ ಬದಿಯಡ್ಕ ಚಂಬಲ್ತಿಮಾರ್ ನಿವಾಸಿ ಸಿ. ಗೋಪಾಲಕೃಷ್ಣ ಭಟ್(74)ಮೃತಪಟ್ಟಿದ್ದಾರೆ. ಬೋಳುಕಟ್ಟೆ ಸನಿಹ ತಮ್ಮ ವಸತಿಗೆ ತೆರಳಲು ರಸ್ತೆ ಅಡ್ಡ ದಾಟುವ ಮಧ್ಯೆ ಮುಳ್ಳೇರಿಯ ಭಾಗದಿಂದ ಆಗಮಿಸಿದ ಕಾರು ಡಿಕ್ಕಿಯಾಗಿದೆ. ಗಂಭೀರ ಗಾಯಗೊಂಡ ಇವರನ್ನು ತಕ್ಷಣ ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಅಪಘಾತಕ್ಕೆ ಸಂಬಂಧಿಸಿ ಕಾರು ಚಾಲಕ ಆದಿತ್ಯ ಎಂಬಾತನ ವಿರುದ್ಧ ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.




