ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕಾಸರಗೋಡು ಪೆರಿಯ ಕ್ಯಾಂಪಸ್‍ನಲ್ಲಿ ಮೂಲಸೌಕರ್ಯ ಅಭಿವೃದ್ಧಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಹೊಸ ಶೈಕ್ಷಣಿಕ ಬ್ಲಾಕ್‍ಗಳಿಗೆ ಶಿಲಾನ್ಯಾಸ ಸಮಾರಂಭ ಅ. 30ರಂದು ಬೆಳಗ್ಗೆ 10ಕ್ಕೆ ವಿಶ್ವವಿದ್ಯಾಲಯ ಕ್ಯಾಂಪಸ್‍ನಲ್ಲಿ ಜರುಗಲಿರುವುದಾಗಿ ಪ್ರಭಾರಿ ಕುಲಸಚಿವ ಡಾ.ಆರ್.ಜಯಪ್ರಕಾಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ ರಾಜ್ಯ ಸಚಿವ ಜಾರ್ಜ್ ಕುರಿಯನ್ ಶಿಲಾನ್ಯಾಸ ನಡೆಸುವರು. ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವಾಲಯದ ಪ್ರಧಾನ ಮಂತ್ರಿ ಜನ ವಿಕಾಸ್ ಕಾರ್ಯಕ್ರಂ(ಪಿಎಂಜೆವಿಕೆ) ಯೋಜನೆಯನ್ವಯ ಹೊಸ ಶೈಕ್ಷಣಿಕ ಬ್ಲಾಕ್ ನಿರ್ಮಾಣಕ್ಕಾಗಿ ಸಚಿವಾಲಯವು 52.68 ಕೋಟಿ ರೂ. ಮೊತ್ತ ಮಂಜೂರು ಮಾಡಿದೆ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಉಪಕುಲಪತಿ ಪೆÇ್ರ.ಸಿದ್ದು ಪಿ.ಅಲ್ಗೂರ್ ಸಮಾರಂಭದ ಅಧ್ಯಕ್ಷತೆ ವಹಿಸುವರು. ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್, ಉದುಮ ಶಾಸಕ ಸಿ.ಎಚ್. ಕುಂಞಂಬು, ಪ್ರಭಾರಿ ಕುಲಸಚಿವ ಡಾ. ಆರ್. ಜಯಪ್ರಕಾಶ್, ಸ್ಕೂಲ್ ಆಫ್ ಬಿಸಿನೆಸ್ ಸ್ಟಡೀಸ್‍ನ ಡೀನ್ ಪೆÇ್ರ. ಸಜಿ ಟಿ.ಜಿ ಉಪಸ್ಥಿತರಿರುವರು. ಸಮಾರಂಭದಲ್ಲಿ ಕಾರ್ಯಕಾರಿ ಮಂಡಳಿ, ಶೈಕ್ಷಣಿಕ ಮಂಡಳಿ, ಹಣಕಾಸು ಸಮಿತಿ ಸದಸ್ಯರು, ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಪ್ರಮುಖ ಸಾಮಾಜಿಕ ಮತ್ತು ಸಾಂಸ್ಕøತಿಕ ವ್ಯಕ್ತಿಗಳು ಮತ್ತು ಶೈಕ್ಷಣಿಕ ತಜ್ಞರು, ರಾಜಕೀಯ ಪ್ರತಿನಿಧಿಗಳು ಭಾಗವಹಿಸುವರು.
7500 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಿಸಲಾಗುವ ಈ ಕಟ್ಟಡವು 25 ಸ್ಮಾರ್ಟ್ ತರಗತಿ ಕೊಠಡಿಗಳನ್ನು ಹೊಂದಿರುತ್ತದೆ, ವಿಭಾಗೀಯಗ್ರಂಥಾಲಯಗಳು, ಕಂಪ್ಯೂಟರ್ ಪ್ರಯೋಗಾಲಯಗಳು, ಕಚೇರಿ ಕೊಠಡಿಗಳು ಇತ್ಯಾದಿ ಇರಲಿವೆ. ಜತೆಗೆ 50 ಕಿಲೋವ್ಯಾಟ್ ಸೌರ ವಿದ್ಯುತ್ ಸ್ಥಾವರ, 1 ಲಕ್ಷ ಲೀಟರ್ ಮಳೆನೀರಿನ ಸಂಗ್ರಹಣಾ ಟ್ಯಾಂಕ್ ಮತ್ತು 500 ಜನರಿಗೆ ಕುಳಿತುಕೊಳ್ಳಬಹುದಾದ ಸೆಮಿನಾರ್ ಹಾಲ್‍ನಂತಹ ವಿಶೇಷ ಲಕ್ಷಣಗಳನ್ನು ಕಟ್ಟಡ ಹೊಂದಿರಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಭಾರಿ ಹಣಕಾಸು ಅಧಿಕಾರಿ ಪೆÇ್ರ.ರಾಜೇಂದ್ರ ಪಿಲಾಂಗಟ್ಟೆ, ಸಾರ್ವಜನಿಕ ಸಂಪರ್ಕ ಅಧಿಕಾರಿ ಕೆ.ಸುಜಿತ್ ಉಪಸ್ಥಿತರಿದ್ದರು.




