ಕಾಸರಗೋಡು: ಶ್ರೀ ಸತ್ಯಸಾಯಿಬಾಬಾ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಅಸೌಖ್ಯಪಿಡಿತರಿಗೆ ಗಾಲಿಕುರ್ಚಿಗಳ ವಿತರಣಾ ಕಾರ್ಯ ಕಾಸರಗೋಡು ತಾಳಿಪಡ್ಪು ಶ್ರೀ ಸತ್ಯಸಾಯಿ ಅಭಯನಿಕೇತನದಲ್ಲಿ ನಡೆಯಿತು. ಶ್ರೀ ಸತ್ಯಸಾಯಿ ಅಭಯನಿಕೇತನ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶ್ರೀ ಸತ್ಯಸಾಯಿ ಸೇವಾ ಸಂಘಟನೆಯ ಜಿಲ್ಲಾ ಸಮಿತಿ ಅಧ್ಯಕ್ಷ ಎಚ್.ಮಹಾಲಿಂಗ ಭಟ್ ಸಮಾರಂಭ ಉದ್ಘಾಟಿಸಿದರು. ಬಿಎಸ್‍ಎಸ್ ಅಭ್ಯನಿಕೇತನ ಅಧ್ಯಕ್ಷ ಡಾ.ಎಸ್.ಬಿ. ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಬಿ.ವಿ. ಕುಮಾರ್ ಬೆಂಗಳೂರು, ಕಾಸರಗೋಡು ಜನರಲ್ ಆಸ್ಪತ್ರೆಯ ಡಾ. ಎಂ.ಎ. ಅರುಣ್ ರಾಮ್, ಕೆ. ಲತಾ, ಪ್ರೇಮಪ್ರಕಾಶ್, ರಾಮಕೃಷ್ಣ ಉಪಸ್ಥಿತರಿದ್ದರು. ಸಾಯಿ ಸುಮನ್ ಸ್ವಾಗತಿಸಿದರು. ಸಾಯಿ ಅರವಿಂದ್ ವಮದಿಸಿದರು. ಸಮಾರಂಭದಲ್ಲಿ ಅಸೌಖ್ಯಪೀಡಿತ ಆರು ಮಮದಿಗೆ ಗಾಲಿ ಕುರ್ಚಿಗಳನ್ನು ವಿತರಿಸಲಾಯಿತು.




