ಕಾಸರಗೋಡು: ಭಾರತೀಯ ವಿದ್ಯಾನಿಕೇತನ ಜಿಲ್ಲಾ ಕಲೋತ್ಸವ ಪೆÇಯಿನಾಚಿಯ ಸರಸ್ವತಿ ವಿದ್ಯಾಲಯದಲ್ಲಿ ನಡೆಯಲಿದ್ದು, ಕಲೋತ್ಸವದ ಯಶಸ್ಸಿಗಾಗಿ ಸ್ವಾಗತ ತಂಡ ರಚಿಸಲಾಯಿತು. ಸರಸ್ವತಿ ವಿದ್ಯಾಲಯದ ಪೆÇೀಷಕ.ಎಂ. ಕೃಷ್ಣನ್ ನಾಯರ್ ಮುನಿಕ್ಕಲ್ ಸಮಾರಂಭ ಉದ್ಘಾಟಿಸಿದರು.
ಶಾಲಾ ಸಮಿತಿಯ ಅಧ್ಯಕ್ಷ ಚಂದ್ರನ್ ಅರಯಲಿಂಗಲ್ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ವಿದ್ಯಾನಿಕೇತನ ರಾಜ್ಯ ಸಮಿತಿ ಸದಸ್ಯ ಪಿ. ಗಣೇಶನ್ ಮುಖ್ಯ ಭಾಷಣ ಮಾಡಿದರು. ಜಿಲ್ಲಾ ಉಪಾಧ್ಯಕ್ಷ ಅಧ್ಯಕ್ಷ ವಿಠಲ ಭಟ್, ಕೋಶಾಧಿಕಾರಿ ಕೆ.ಪಿ. ಕರುಣಾಕನ್, ಕಾರ್ಯದರ್ಶಿ ಎಂ.ಜಯಕುಮಾರ್, ಜತೆ ಕಾರ್ಯದರ್ಶಿ ಅಂಬಿಕಾ ಅರವಿಂದ್, ಶಾಲಾ ಪೆÇೀಷಕ ಸಮಿತಿ ಅಧ್ಯಕ್ಷ ಟಿ.ವಿ.ವಿಷ್ಣುಪ್ರಿಯಾ ಉಪಸ್ಥಿತರಿದ್ದರು. ಕಾರ್ಯಕ್ರಮದ ಯಶಸ್ಸಿಗಾಗಿ ಸ್ವಾಗತ ಸಮಿತಿ ರಚಿಸಲಾಯಿತು. ಎಂ. ಕೃಷ್ಣನ್ ನಾಯರ್ ಮುನಿಕ್ಕಲ್ ಅಧ್ಯಕ್ಷ, ಚಂದ್ರನ್ ಅರಯಲಿಂಗಲ್ ಕಾರ್ಯಾಧ್ಯಕ್ಷರು, ಕೆ. ಶ್ರೀನಿವಾಸನ್ ಸಂಚಾಲಕರು ಹಾಗೂ ಎಂ. ಸುರೇಶ್ ಕುಮಾರ್ ಅವರನ್ನು ಕೋಶಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಯಿತು. ಶಾಲಾ ಕಾರ್ಯದರ್ಶಿ ಹರೀಶ್ ಪರಂಬ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಸಬಿತಾ ವಂದಿಸಿದರು.





