HEALTH TIPS

ಪ್ರಕಾಶ್ ರಾಜ್, ರಹಮತ್, ರಾಜೇಂದ್ರ ಚೆನ್ನಿ, ಝಕರಿಯ ಸಹಿತ 70 ಮಂದಿಗೆ ʼಕನ್ನಡ ರಾಜ್ಯೋತ್ಸವ ಪ್ರಶಸ್ತಿʼ

ಬೆಂಗಳೂರು : ಕರ್ನಾಟಕ ರಾಜ್ಯ ಸರಕಾರವು 2025ನೇ ಸಾಲಿನ 'ಕನ್ನಡ ರಾಜ್ಯೋತ್ಸವ ಪ್ರಶಸ್ತಿ'ಯನ್ನು ಪ್ರಕಟಿಸಿದ್ದು, ನಟ ಪ್ರಕಾಶ್‌ ರಾಜ್‌, ಹಿರಿಯ ಪತ್ರಕರ್ತ ಬಿ.ಎಂ.ಹನೀಫ್‌, ರಾಜೇಂದ್ರ ಚೆನ್ನಿ, ಲೇಖಕ ರಹಮತ್‌ ತರೀಕೆರೆ, ಅನಿವಾಸಿ ಭಾರತೀಯ ಉದ್ಯಮಿ ಝಕರಿಯಾ ಜೋಕಟ್ಟೆ ಸೇರಿದಂತೆ ವಿವಿಧ ಕ್ಷೇತ್ರಗಳ 70 ಮಂದಿ ಸಾಧಕರನ್ನು ಪ್ರಶಸ್ತಿ ಆಯ್ಕೆ ಮಾಡಲಾಗಿದೆ ಎಂದು ಸಚಿವ ಶಿವರಾಜ್ ತಂಗಡಗಿ ಮಾಹಿತಿ ನೀಡಿದ್ದಾರೆ.

ಪ್ರಶಸ್ತಿ ಪುರಸ್ಕೃತರು :



ಪೌರ ಕಾರ್ಮಿಕರಾದ ಫಕೀರವ್ವ ಅವರಿಗೂ ಪ್ರಶಸ್ತಿ ನೀಡಲಾಗಿದೆ. ವೀಣೆಬ್ರಹ್ಮ ಬೆಂಗಳೂರು ಗ್ರಾಮಾಂತರ ಪ್ರದೇಶದ ಪೆನ್ನ ಓಬಳಯ್ಯ, ಐಎಎಸ್‌ ಅಧಿಕಾರಿ ಸಿದ್ದಯ್ಯ, ನಟ ಪ್ರಕಾಶ್ ರಾಜ್ ಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಈ ಬಾರಿ ಸಾಹಿತ್ಯ ಕ್ಷೇತ್ರಕ್ಕೆ 6 ಪ್ರಶಸ್ತಿ ನೀಡಲಾಗಿದೆ ಎಂದಿದ್ದಾರೆ.

ಈ ಬಾರಿ ಜಿಲ್ಲಾವಾರು ರಾಜ್ಯೋತ್ಸವ ಪ್ರಶಸ್ತಿಯನ್ನು ಹಂಚಿಕೆ ಮಾಡಲಾಗಿದೆ. 2114 ಅರ್ಜಿ ಬಂದ್ದವು. ಇವುಗಳಲ್ಲಿ 70 ಪ್ರಶಸ್ತಿಗಳನ್ನ ಸರ್ಕಾರ ನೀಡಿದೆ. ಇದರಲ್ಲಿ ಮಹಿಳೆಯರಿಗೆ 13 ಪ್ರಶಸ್ತಿ ಕೊಡಲಾಗಿದೆ. 60 ವರ್ಷ ದಾಟಿದವರು ಮಾತ್ರವೇ ಈ ಪ್ರಶಸ್ತಿಗೆ ಅರ್ಹರಾಗಿದ್ದರು.

'ಸಣ್ಣ ಸಣ್ಣ ಕಮ್ಯುನಿಟಿಗಳನ್ನ ಗುರುತಿಸಿ ಪ್ರಶಸ್ತಿ ಕೊಡುವ ಕೆಲಸ ಮಾಡಿದ್ದೇವೆ. ನಮ್ಮ ಆಸೆಯಂತೆ ಸಾಮಾಜಿಕ ನ್ಯಾಯ , ಪ್ರತಿಭೆಯನ್ನ ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಸಲಹಾ ಸಮಿತಿ ಸದಸ್ಯರು ಹಾಗೂ 5 ಉಪ ಸಮಿತಿ ಸದಸ್ಯರು 3 ದಿನ ಕುಳಿತು ಸಭೆ ಮಾಡಿ ಒಳ್ಳೆ ಒಳ್ಳೆ ಆಯ್ಕೆ ಕೊಟ್ಟಿದ್ದಾರೆ. ಈ ಬಾರಿ 2315 ಅರ್ಜಿ ಬಂದಿತ್ತು. ಅರ್ಜಿ ಹಾಕದೇ ಇರುವವರನ್ನ ಗುರುತಿಸಿ ಕೂಡ ಪ್ರಶಸ್ತಿ ಕೊಡಲಾಗುತ್ತಿದೆ.

ಏನಿರಲಿದೆ ಪ್ರಶಸ್ತಿ

ಪ್ರಶಸ್ತಿಯಲ್ಲಿ 22 ಕ್ಯಾರಟ್‌ಗ 25 ಗ್ರಾಂ ಚಿನ್ನ. 5 ಲಕ್ಷ ಹಣದ ಚೆಕ್ ಹಾಗೂ ಪ್ರಮಾಣ ಪತ್ರ,ಭುವನೇಶ್ವರಿ ವಿಗ್ರಹ, ಶಾಲು, ಫಲಕ ವಿತರಣೆ ಮಾಡಲಾಗುತ್ತದೆ. ನ.1 ರ ಸಂಜೆ ಚಹಾ ಕೂಟ ಆಯೋಜನೆಯಾಗಲಿದ್ದು. ಕರ್ನಾಟಕ ರತ್ನ ಪ್ರಶಸ್ತಿಯನ್ನು ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಮಾಡುವ ಯೋಜನೆಯನ್ನು ಸರ್ಕಾರ ಹಾಕಿಕೊಂಡಿದೆ. ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಶಿವರಾಜ್‌ ತಂಗಡಗಿ ಹೇಳಿದ್ದಾರೆ.

ಕಳೆದ ಬಾರಿ ಕನ್ನಡ ರಾಜ್ಯೋತ್ಸವ ಮಾಡಿ ಅಂತ ಕಡ್ಡಾಯ ಮಾಡಿದ್ದೆವು. ಈ ಬಾರಿಯೂ ಕಡ್ಡಾಯವಾಗಿ ಎಲ್ಲರೂ ಆಚರಣೆ ಮಾಡಬೇಕು. ಆದೇಶ ಮಾಡುವುದರ ಬಗ್ಗೆ ಡಿಸಿಎಂ ಜೊತೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries