ಮಂಜೇಶ್ವರ: ಸೂಕ್ತ ದಾಖಲೆಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 75ಲಕ್ಷ ರೂ. ನಗದನ್ನು ಮಂಜೇಶ್ವರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗುರುವಾರ ಬೆಳಗ್ಗೆ ಹೈವೇ ಪೆಟ್ರೋಲಿಂಗ್ ನಡೆಸುತಿದ್ದ ವೇಳೆ ಮಂಗಳೂರಿನಿಂದ ಕಾಸರಗೋಡು ಭಾಗಕ್ಕೆ ಆಗಮಿಸತ್ತಿದ್ದ ಕಾರನ್ನು ತಡೆದು ನಿಲ್ಲಿಸಿ, ತಪಾಸಣೆ ನಡೆಸಿದಾಗ ದಾಖಲೆ ರಹಿತ ನಗದು ಪತ್ತೆಯಾಯಿತು.
ತುಕಾರಾಂ ಎಂಬ ವ್ಯಕ್ತಿ ಹಾಗೂ ಅವರ ಪತ್ನಿ ಇದ್ದ ಕಾರನ್ನು ಅಕ್ಷಯ್ ಎಂಬವರು ಚಲಾಯಿಸುತ್ತಿದ್ದರು. ಕಾರು ಪ್ರಯಾಣಿಕರು ಹಣದ ಕುರಿತು ಸೂಕ್ತ ಮಾಹಿತಿ ನೀಡಲು ವಿಫಲರಾದ ಕಾರಣ ನಗದನ್ನು ಪೆÇೀಲೀಸರು ವಶಪಡಿಸಿಕೊಂಡಿದ್ದರು.

