HEALTH TIPS

ಚೀನಾ ಈಸ್ಟರ್ನ್ ಏರ್‌ಲೈನ್ಸ್‌: ನ.9ರಿಂದ ಶಾಂಘೈ-ದೆಹಲಿ ವಿಮಾನ ಸಂಚಾರ

ಬೀಜಿಂಗ್: ಚೀನಾ ಈಸ್ಟರ್ನ್ ಏರ್‌ಲೈನ್ಸ್‌ ಸಂಸ್ಥೆಯು ನವೆಂಬರ್‌ 9ರಿಂದ ಶಾಂಘೈ-ನವದೆಹಲಿ ನಡುವೆ ವಿಮಾನ ಸಂಚಾರ ಪುನರಾರಂಭಿಸಲು ನಿರ್ಧರಿಸಿದೆ. ಸಂಸ್ಥೆಯ ಆನ್‌ಲೈನ್‌ ಟಿಕೆಟ್‌ ಮಾರಾಟ ವೇದಿಕೆಯು ಈ ಮಾಹಿತಿಯನ್ನು ಒದಗಿಸಿದೆ. 

ಭಾರತ-ಚೀನಾ ನಡುವೆ ನೇರ ವಿಮಾನ ಸಂಚಾರ ಮತ್ತೆ ಆರಂಭಗೊಳ್ಳಲಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಈ ತಿಂಗಳ ಆರಂಭದಲ್ಲಿ ಪ್ರಕಟಿಸಿತ್ತು.

ಕೋಲ್ಕತ್ತದಿಂದ ಚೀನಾದ ಗುವಾಂಗ್‌ಝೌ ನಗರಕ್ಕೆ ಅಕ್ಟೋಬರ್‌ 26ರಿಂದ ನೇರ ವಿಮಾನ ಸಂಚಾರವನ್ನು
ಪುನರಾರಂಭಿಸುವುದಾಗಿ ಭಾರತದ ವಿಮಾನಯಾನ ಸಂಸ್ಥೆ ಇಂಡಿಗೊ ಈಗಾಗಲೇ ಹೇಳಿದೆ.

ಕೋವಿಡ್‌ ಹಾಗೂ ಅದರ ಬೆನ್ನಲ್ಲೇ ಪೂರ್ವ ಲಡಾಖ್‌ನ ಗಡಿ ಸಮಸ್ಯೆ ಉದ್ಭವವಾದ್ದರಿಂದ ಭಾರತ-ಚೀನಾ ನೇರ ವಿಮಾನ ಸಂಚಾವ ಸ್ಥಗಿತಗೊಂಡಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries